ಮನೆ ಬಾಗಿಲು ಮುರಿದು ಹಣ ಕಳವು

Crime Logo
Published on

ಕೊಳ್ಳೇಗಾಲ: ಪಟ್ಟಣದ ಮಠದ ಬೀದಿಯ ಮನೆಯೊಂದರ ಬಾಗಿಲು ಒಡೆದು ಕಳ್ಳರು 75 ಸಾವಿರ ರೂ. ಕಳವು ಮಾಡಿದ್ದಾರೆ.

ಮಠದ ಬೀದಿಯ ಉಷಾರಾಣಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಬುಧವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಷಾರಾಣಿ ಅವರು ಕಾರ್ಯನಿಮಿತ್ತ ಜು.2 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಚಾಮರಾಜನಗರಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಕೊಳ್ಳೇಗಾಲಕ್ಕೆ ಹಿಂದಿರುಗಿ ದೇವಾಂಗ ಪೇಟೆಯಲ್ಲಿರುವ ಸ್ನೇಹಿತೆಯ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದರು.

ಬುಧವಾರ ಉಷಾರಾಣಿ ಮನೆಯ ಪಕ್ಕದ ಶಿವರುದ್ರಸ್ವಾಮಿ ನಿಮ್ಮ ಮನೆಯ ಬಾಗಿಲು ತೆರೆದಿರುವುದಾಗಿ ತಿಳಿಸಿದ್ದಾರೆ. ತಕ್ಷಣ ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಮೀಟಿ ಒಳನುಗ್ಗಿ ಬೀರುನಲ್ಲಿದ್ದ 75 ಸಾವಿರ ರೂ. ಹಣವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net