ಬಾವಿಗೆ ಬಿದ್ದು ಮಹಿಳೆ ಸಾವು

91dcb522-3b68-44ea-aa89-ae25e0f887d6
Published on

ಕೊಳ್ಳೇಗಾಲ : ತಾಲೂಕಿನ ಮೊಳಗನಕಟ್ಟೆ ಗ್ರಾಮದ ತೋಟದ ಮನೆಯಲ್ಲಿದ್ದ ಕಲ್ಲು ಬಾವಿಗೆ ಸೋಮವಾರ ಮಹಿಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

ಗ್ರಾಮದ ಸೆಲ್ವರಾಜ್ ಪತ್ನಿ ಕಲ್ಯಾಣಿ (50) ಮೃತರು. ಈಕೆಯ ಕುಟುಂಬ ಹಲವು ವರ್ಷಗಳಿಂದ ಮೊಳಗನಕಟ್ಟೆ ಹೊರ ವಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಿದೆ. ಮನೆ ಪಕ್ಕದಲ್ಲೇ ಹಸುವಿನ ಕೊಟ್ಟಿಗೆ ಇದ್ದು, ಪಕ್ಕದಲ್ಲಿ ಹಳೆಯ ಕಲ್ಲು ಬಾವಿಯಿದೆ. ಎಂದಿನಂತೆ ಹಸುವಿನ ಹಾಲು ಕರೆಯಲು ಕಲ್ಯಾಣಿ ಕೊಟ್ಟಿಗೆಗೆ ಹೋಗಿದ್ದಾರೆ. ಕರುವನ್ನು ಪಕ್ಕಕ್ಕೆ ಕಟ್ಟುವ ಸಂದರ್ಭ ಕರು ಎಳೆದ ರಭಸಕ್ಕೆ ಆಯತಪ್ಪಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸತ್ತಿದ್ದಾರೆ.

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಗಣೇಶ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಾವಿಯಲ್ಲಿ ಮುಳುಗಿದ್ದ ಮೃತ ದೇಹವನ್ನು ಮೇಲೆತ್ತಿ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ಮೃತಳ ಮಗ ಪ್ರತಾಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net