

ಕೊಳ್ಳೇಗಾಲ: ತಾಲೂಕಿನ ಗುಂಡೇಗಾಲ ಗ್ರಾಮದ ಮನೆಯೊಂದರ ಬಾಗಿಲು ಒಡೆದ ಕಳ್ಳರು 104 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ಪದಾರ್ಥಗಳನ್ನು ಕಳವು ಮಾಡಿರುವ ಬಗ್ಗೆ ಭಾನುವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಪುಟ್ಟಸಿದ್ದಮ್ಮ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪುಟ್ಟಸಿದ್ದಮ್ಮ ಪುತ್ರನಿಗೆ 1 ತಿಂಗಳಿನಿಂದ ಅನಾರೋಗ್ಯವಿದ್ದ ಕಾರಣ ಮನೆಗೆ ಬೀಗ ಹಾಕಿಕೊಂಡು ಪಕ್ಕದ ಮನೆಯವರಿಗೆ ಹೇಳಿ ಬೆಂಗಳೂರಿನ ನಿಮ್ಹಾನ್ಸ್‌ಗೆ ತೆರಳಿದ್ದರು. ಜೂ.23ರಂದು ಬೆಳಗ್ಗೆ ಪಕ್ಕದ ಮನೆಯ ರಾಜಮ್ಮ ಮನೆ ಬಾಗಿಲು ಸ್ವಲ್ಪ ತೆರೆದಿದ್ದನ್ನು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೀರುವಿನಲ್ಲಿದ್ದ 20 ಗ್ರಾಂ 2 ಚಿನ್ನದ ಸರ, 20 ಗ್ರಾಂ 1 ನೆಕ್ಲೇಸ್, 12 ಗ್ರಾಂ 1 ಜುಮುಕಿ, 7 ಗ್ರಾಂ ಮಾಟಿ, 7 ಗ್ರಾಂ ಓಲೆ, 4 ಗ್ರಾಂ ಹ್ಯಾಂಗಿಂಗ್ಸ್, 9 ಗ್ರಾಂ ಉಂಗುರ ಸೇರಿ ಒಟ್ಟು 104 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ಪದಾರ್ಥ ಕಳವಾಗಿದೆ. ಈ ಬಗ್ಗೆ ಪುಟ್ಟಸಿದ್ದಮ ಪುತ್ರಿ ಸೌಮ್ಯಾ ಪೊಲೀಸರಿಗೆ ದೂರು ನೀಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಗಣೇಶ್ ಹಾಗೂ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.