

ಕೊಳ್ಳೇಗಾಲ: ಪಟ್ಟಣದ ದೇವಾಂಗಪೇಟೆಯ ವಿನಾಯಕ ದೇವಸ್ಥಾನ ಸಮೀಪದ ಮನೆಯೊಂದರ ಬಾಗಿಲು ಮುರಿದು ದುರ್ಷ್ಕಮಿಗಳು ಸುಮಾರು 1.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 7 ಸಾವಿರ ರೂ. ನಗದು ಕಳ್ಳತನ ಮಾಡಿದ್ದು, ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ದೇವಾಂಗಪೇಟೆ ನಿವಾಸಿ ಲೇಟ್ ಮುರುಗೇಶ್ ಅವರ ಪತ್ನಿ ಶಶಿಕಲಾ ಅವರ ಮನೆಯಲ್ಲಿ ಕಳ್ಳತನ ನಡೆದಿರುವುದು. ಶಶಿಕಲಾ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಜೂ.21 ರಾತ್ರಿ ಮನೆಯ ಬಾಗಿಲು ಹಾಕಿಕೊಂಡು ಪಕ್ಕದ ಮಹಾದೇವಿ ಅವರ ಮನೆಯಲ್ಲಿ ಮಲಗಿದ್ದರು. ಈ ವೇಳೆ ಕಳ್ಳರು ಮನೆ ಬಾಗಿಲು ಒಡೆದು 30 ಗ್ರಾಂ ನೆಕ್ಲೇಸ್, 12 ಗ್ರಾಂ ಚೈನ್, 2 ಸಾವಿರ ಬೆಲೆ ಬಾಳುವ ಬೆಳ್ಳಿ ಪದಾರ್ಥಗಳು, 7 ಸಾವಿರ ರೂ. ನಗದು ಕಳವು ಮಾಡಿದ್ದಾರೆ. ಬೆಳಗ್ಗೆ ಮನೆಗೆ ಬಂದ ಶಶಿಕಲಾ ಅವರಿಗೆ ಮನೆಯಲ್ಲಿ ಕಳ್ಳತನ ನಡೆದಿರುವುದು ತಿಳಿದು, ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.