ಬಾಲಕಿ ಗರ್ಭಿಣಿ, ಪ್ರಕರಣ ದಾಖಲು

Crime Logo
Published on

ಕೊಳ್ಳೇಗಾಲ: ತಾಲೂಕಿನ ಗ್ರಾಮವೊಂದರ 16 ವರ್ಷದ 11 ತಿಂಗಳ ಬಾಲಕಿಯನ್ನು ಮದುವೆಯಾಗಿ ಗರ್ಭಿಣಿ ಮಾಡಿರುವ ಸಂಬಂಧ ಗುರುವಾರ ಆಕೆಯ ಪತಿಯ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.

ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದ ಸುದೀಪ್ ಆರೋಪಿ. ಈತ ಅಪ್ರಾಪ್ತೆಯನ್ನು ಬಾಲ್ಯ ವಿವಾಹವಾಗಿದ್ದಾನೆ. ಆಕೆ ಹೆರಿಗೆಗೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ವೇಳೆ ಅರೋಗ್ಯಾಧಿಕಾರಿಗೆ ಅಪ್ರಾಪ್ತೆ ಎಂದು ತಿಳಿದು ಕೊಳ್ಳೇಗಾಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸೂಪರ್‌ವೈಸರ್ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅಪ್ರಾಪ್ತೆ ವಿವಾಹವಾಗಿ ಗರ್ಭಿಣಿಯಾಗಲು ಕಾರಣನಾದ ಸುದೀಪ್ ಹಾಗೂ ಬಾಲ್ಯ ವಿವಾಹ ಮಾಡಿದ ಅಪ್ರಾಪ್ತೆ ತಾಯಿಯ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net