ಕಾವೇರಿ ನದಿಯಲ್ಲಿ ಪುರುಷನ ಶವ ಪತ್ತೆ

21-kollegal-12Ramakrishna(34), mrutha
Published on

ಕೊಳ್ಳೇಗಾಲ: ಸಾಲಭಾದೆಯ ಖಿನ್ನತೆಗೊಳಗಾಗಿ ವ್ಯಕ್ತಿಯೊಬ್ಬ ತಾಲೂಕಿನ ಶಿವನಸಮುದ್ರ ಗ್ರಾಮದ ವೆಸ್ಲಿ ಸೇತುವೆ ಸಮೀಪದ ಕಾವೇರಿ ನದಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದು, ಈ ಸಂಬಂಧ ಗುರುವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ರಾಮಕೃಷ್ಣ (34) ಮೃತ. ಈತನೊಂದಿಗೆ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದ ಮಹದೇವನಾಯಕ ಅವರ ಪುತ್ರಿ ಮಾದೇವಿ ಅವರೊಂದಿಗೆ 2007ರಲ್ಲಿ ವಿವಾಹವಾಗಿತ್ತು. ಇವರಿಬ್ಬರ 17 ವರ್ಷದ ದಾಂಪತ್ಯ ಜೀವನ ಬಹಳ ಚನ್ನಾಗಿತ್ತು. ಆದರೆ, ರಾಮಕೃಷ್ಣ ವ್ಯವಸಾಯಕ್ಕಾಗಿ ಸಾಲ ಮಾಡಿದ್ದ ಎನ್ನಲಾಗಿದ್ದು. ಸಾಲಬಾಧೆಯಿಂದ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ಬಗ್ಗೆ ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ, ರಾಮಕೃಷ್ಣನಿಗೆ ಸಂಬಂಧಿಕರು ತಿಳಿವಳಿಕೆ ಹೇಳಿದ್ದರು.

ಜೂ.13ರಂದು ಕೆಲಸಕ್ಕೆ ಹೋಗುತ್ತೇನೆಂದು ಮನೆಯಿಂದ ರಾಮಕೃಷ್ಣ ಹೊರಬಂದಿದ್ದನು. 9 ದಿನಗಳಾದರೂ ಮನೆಗೆ ಫೋನ್ ಸಹ ಮಾಡಿರಲಿಲ್ಲ. ಅತ್ತ ಮನೆಯವರು ಫೋನ್ ಕರೆ ಮಾಡಿದಾಗ ಈತನ ಮೊಬೈಲ್ ಸ್ವೀಚ್ ಆಫ್ ಆಗಿತ್ತು. ಆದರೀಗ ಜೂ.21 ರಂದು ತಾಲೂಕಿನ ಶಿವನಮುದ್ರ ಗ್ರಾಮದ ವೆಸ್ಲಿ ಸೇತುವೆ ಬಳಿಯ ಕಾವೇರಿ ನದಿಯಲ್ಲಿ ರಾಮಕೃಷ್ಣ ಮೃತ ದೇಹ ದೊರೆತಿದೆ. ಈ ಸಂಬಂಧ ಪತ್ನಿ ಮಾದೇವಿ ತನ್ನ ಗಂಡ ಸಾಲದ ಖಿನ್ನತೆಗೊಳಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತನ ಶವ ಇರಿಸಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net