ಬಿಎಂಎಚ್‌ಪಿ ಶಾಲೆಯಲ್ಲಿ ಆಸನಗಳ ಅಭ್ಯಾಸ

21-kollegal-7,,,
Published on

ಕೊಳ್ಳೇಗಾಲ: ಪಟ್ಟಣದ ಬಿಎಂಎಚ್‌ಪಿ ಶಾಲೆಯಲ್ಲಿ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಶಾಲೆಯ ಮೈದಾನದಲ್ಲಿ ಮಕ್ಕಳಿಗೆ ಯೋಗ ಶಿಕ್ಷಕ ಪಿ.ಕುಮಾರ್ ತಾಡಾಸನ, ವೃಕ್ಷಾಸನ, ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಭುಜಾಂಗಸನ, ಪ್ರಾಣಾಯಮ ಸೇರಿದಂತೆ ಇತರ ಆಸನಗಳನ್ನು ಅಭ್ಯಾಸ ಮಾಡಿಸಿದರು. ಬೆಳಗ್ಗೆ 7.30 ರಿಂದ 8.30 ರವರೆಗೆ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಿದ್ದರು.

ಬಿಎಂಎಚ್‌ಪಿ ಪ್ರೌಢಶಾಲೆ ಶಿಕ್ಷಕಿ ಶಶಿಕಲಾ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಸನಾ ಪ್ರೇಮಕುಮಾರಿ, ಶಿಕ್ಷಕರಾದ ವಸಂತ ಕುಮಾರ್, ವಿಜಯ ಪ್ರೇಮಕುಮಾರಿ, ದೀಪಕ್, ಶರತ್ ರಾಜ್, ದೈಹಿಕ ಶಿಕ್ಷಣ ಶಿಕ್ಷಕ ನಿಶಿತಾನಂದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net