ಪೋಕ್ಸೋ ಪ್ರಕರಣ ದಾಖಲು

Crime Logo
Published on

ಕೊಳ್ಳೇಗಾಲ: ತಾಲೂಕಿನ ಗ್ರಾಮವೊಂದರ 16 ವರ್ಷದ 11 ತಿಂಗಳ ಅಪ್ರಾಪ್ತೆ ಬಾಲಕಿಯನ್ನು ಮದುವೆಯಾಗಿ ಗರ್ಭೀಣಿ ಮಾಡಿರುವ ಸಂಬಂಧ ಗುರುವಾರ ಆಕೆಯ ಪತಿಯ ಮೇಲೆ ಫೋಕ್ಸೋ ಪ್ರಕರಣ ದಾಖಲಾಗಿದೆ. 

ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದ ಸುದೀಪ್ ಆರೋಪಿಯಾಗಿದ್ದಾನೆ. ಈತ ಅಪ್ರಾಪ್ತೆಯನ್ನು ಬಾಲ್ಯ ವಿವಾಹವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದು. ಕಾರಣ ಆಕೆ ಗರ್ಭಿಣಿಯಾಗಿ ಹೆರಿಗೆ ಮಾಡಿಸಿಕೊಳ್ಳಲು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ವೇಳೆ ಅರೋಗ್ಯಾ ಧಿಕಾರಿಗಳಿಗೆ ಅಪ್ರಾಪ್ತೆ ಎಂದು ತಿಳಿದು ಕೊಳ್ಳೇಗಾಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.  ನಂತರ, ಮಹಿಳಾ ಮತ್ತು ಮಕ್ಕಳ ಇಲಾಖೆ ಯ ಸೂಪರ್ ವೈಸರ್  ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರಿಗೆ  ಈ ಬಗ್ಗೆ ದೂರು ನೀಡಿದ್ದು. ಅಪ್ರಾಪ್ತೆ  ವಿವಾಹವಾಗಿ ಗರ್ಭಧರಿಸಲು ಕಾರಣ ಕರ್ತನಾದ ಸುದೀಪ್ ಹಾಗೂ ಬಾಲ್ಯ ವಿವಾಹ ಮಾಡಿದ ಅಪ್ತಾಪ್ತೆ ತಾಯಿಯ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net