ವಿಷದ ಮಾತ್ರೆ ಸೇವಿಸಿದ್ದ ಯುವಕ ಸಾವು

15-KGLPHOTO-4MOHAMAD AFRIDI MRUTHA VEKTHI
Published on

ಕೊಳ್ಳೇಗಾಲ: ವಿಷದ ಮಾತ್ರೆಗಳನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ 19 ವರ್ಷದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ ಮೃತಪಟ್ಟಿರುವ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ವಕೀಲ ರಾಮಯ್ಯ ಬಡಾವಣೆಯ ಮೊಹಮ್ಮದ್ ಆಫ್ರೀದಿ ಮೃತ ಯುವಕ. ಈತ ಶುಕ್ರವಾರ ಮನೆಯಲ್ಲಿ ವಿಷದ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದ. ಈ ವೇಳೆ ಪಾಲಕರು ಆತನನ್ನು ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಉನ್ನತ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಮೊಹಮ್ಮದ್ ಆಫ್ರೀದಿ ಮೃತಪಟ್ಟಿದ್ದಾರೆ. ವಿಚಾರ ತಿಳಿದ ಪೊಲೀಸರು ಮೈಸೂರಿನ ಆಸ್ಪತ್ರೆಗೆ ತೆರಳಿ ಮೃತನ ಪಾಲಕರಿಂದ ಮಾಹಿತಿ ಪಡೆದು ಕೊಂಡಿದ್ದಾರೆ.

ಈ ಬಗ್ಗೆ ಮೃತನ ಸಂಬಂಧಿ ತೌಸೀಫ್ ಪಾಷ ಪಟ್ಟಣದ ಪೊಲೀಸರಿಗೆ ಮೊಹಮ್ಮದ್ ಆಫ್ರೀದಿ ಹೊಟ್ಟೆ ನೋವು ತಾಳಲಾರದೆ ಸ್ಯಾಲ್ಪೋಸ್ ಎಂಬ ಹೆಸರಿನ ಮಾತ್ರೆ ಸೇವಿಸಿ ಮೃತಪಟ್ಟಿದ್ದಾನೆ. ಈತನ ಸಾವಿಗೆ ಬೇರೆ ಯಾವುದೇ ಕಾರಣವಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net