ಬೈಕ್ ನಲ್ಲಿ ಆಯತಪ್ಪಿ ಬಿದ್ದು ಗಾಯ

accident-15
Published on

ಕೊಳ್ಳೇಗಾಲ: ತಾಲೂಕಿನ ಧನಗೆರೆ ಸಮೀಪದ ಮುಖ್ಯರಸ್ತೆಯಲ್ಲಿ ಬೈಕ್ ನಲ್ಲಿ ಮೂವರು ಬರುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಗೊಬ್ಬಳಿ ಗ್ರಾಮದ ಮನು (22), ಆನಂದ್ (24) ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಗೌಡನ ಕೊಪ್ಪಲು ಗ್ರಾಮದ ಸಂಜಯ್(24) ಗಾಯ ಗೊಂಡವರು. ಇವರು ತಾಲೂಕಿನ ಪಾಳ್ಯ ಗ್ರಾಮಕ್ಕೆ ಕಾರ್ಯ ನಿಮಿತ್ತ ಆಗಮಿಸಿದ್ದರು. ನಂತರ, ಭರಚುಕ್ಕಿ ಜಲಪಾತ ವೀಕ್ಷ ಣೆಗೆ ತೆರಳಿ  ಪಾಳ್ಯ ಗ್ರಾಮಕ್ಕೆ  ಹಿಂದಿರುಗುವಾಗ ಮರ್ಗ ಮಧ್ಯೆ  ಧನಗೆರೆ ಗ್ರಾಮದ ಸಮೀಪ ಮುಖ್ಯರಸ್ತೆಯಲ್ಲಿ   ಬೈಕ್ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ನಂತರ, ಸ್ಥಳಕ್ಕೆ ತೆರಳಿದ 112 ಪೊಲೀಸರು ಗಾಯಾ ಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಚಾ.ನಗರ ಜಿಲ್ಲಾಸ್ಪತ್ರೆಗೆ‌ ರವಾನಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net