ಶ್ರೀ ಮಧ್ಯರಂಗನಾಥ ದೇಗುಲ ಹುಂಡಿಯಲ್ಲಿ 20.12 ಲಕ್ಷ ರೂ.ಸಂಗ್ರಹ

13-kglphoto-8
Published on

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದ ಮಧ್ಯ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ನಡೆದಿದ್ದು, 5 ತಿಂಗಳಲ್ಲಿ 20,12,910 ರೂ. ಸಂಗ್ರಹವಾಗಿದೆ.

ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿರ್ದೇಶನದಂತೆ ಸಮೂಹ ದೇವಾಲಯಗಳಾದ ಶ್ರೀ ಮಧ್ಯ ರಂಗನಾಥ ಸ್ವಾಮಿ ದೇವಾಲಯ, ಮೀನಾಕ್ಷಿ ಸಮೇತ ಸೋಮೇಶ್ವರ ದೇವಾಲಯ ಹಾಗೂ ಆದಿಶಕ್ತಿ ಮಾರಮ್ಮನ ದೇವಾಲಯಗಳ ಹುಂಡಿ ಎಣಿಕೆ ನಡೆಸಲಾಯಿತು. 20,12 ,910 ನಗದು ಹಾಗೂ ಎರಡೂವರೆ ಗ್ರಾಂ ಚಿನ್ನ, 5 ಗ್ರಾಂ ಬೆಳ್ಳಿ ದೊರೆತಿದೆ. ಹುಂಡಿ ಎಣಿಕೆಯಲ್ಲಿ ಪಾಳ್ಯ ಉಪ ತಹಸೀಲ್ದಾರ್ ಕೆ.ಬಿ.ವಿಜಯ್ ಕುಮಾರ್, ರಾಜಸ್ವ ನೀರಿಕ್ಷಕ ರಂಗಸ್ವಾಮಿ, ನಿರಂಜನ್, ಸಮೂಹ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಸುರೇಶ್, ಗ್ರಾಮ ಲೆಕ್ಕಿಗರಾದ ರಾಕೇಶ್ ಮರಾಠ, ಮಮತಾ, ಸತೀಶ್, ಶಾಂತರಾಜು. ಮಹದೇವಸ್ವಾಮಿ, ಕುಮಾರ, ಪ್ರಸಾದ್, ದೇವಾಲಯದ ಸಿಬ್ಬಂದಿ, ಅರ್ಚಕರಾದ ಶ್ರೀಧರ್, ನಾಗರಾಜು ದೀಕ್ಷಿತ್, ಪಾಳ್ಯ ಹಾಗೂ ಕಸಬಾ ಗ್ರಾಮ ಸಹಾಯಕರು, ಗ್ರಾಮಾಂತರ ಪೊಲೀಸ್ ಸಿಬ್ಬಂದಿ, ಕೋಟೇಕ್ ಬ್ಯಾಂಕ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net