ನಟರಾಜುಗೆ ಕಸ್ತೂರಿ ಧ್ರುವತಾರೆ ಪ್ರಶಸ್ತಿ

nataraju
Published on

ಕೊಳ್ಳೇಗಾಲ: ಪಟ್ಟಣದ ಭೀಮನಗರ ನಿವಾಸಿ, ಹವ್ಯಾಸಿ ಬರಹಗಾರ ಎಸ್.ನಟರಾಜು ಅವರು ಮಂಡ್ಯದ ಕಸ್ತೂರಿ ಸಿರಿಗನ್ನಡ ವೇದಿಕೆ ನೀಡುವ ಕಸ್ತೂರಿ ಧ್ರುವತಾರೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಡ್ಯದ ಗಾಂ ಭವನದಲ್ಲಿ 75ನೇ ಅಮೃತ ಮಹೋತ್ಸವದ ಅಂಗವಾಗಿ ಅ.30ರಂದು ಆಯೋಜಿಸಿರುವ 27ನೇ ಕವಿ-ಕಾವ್ಯ ಮೇಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಅಭಿನಂದನಾ ಸಮಾರಂಭದಲ್ಲಿ ನಟರಾಜು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯನ್ನು ಸಮ್ಮೇಳನದ ಅಧ್ಯಕ್ಷೆ, ಸಾಹಿತಿ ಜ್ಯೋತಿ ಸಿದ್ದಪ್ಪ ಪ್ರದಾನ ಮಾಡಲಿದ್ದಾರೆ ಎಂದು ಕಸ್ತೂರಿ ಸಿರಿಗನ್ನಡ ವೇದಿಕೆ ಅಧ್ಯಕ್ಷ ಪಿ.ಮಹದೇವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net