ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆ ಕಾಪಾಡಿಕೊಳ್ಳಿ

6-kollegal-3,,,,,
Published on

ಸಿನಿಮಾ ನಟ ರಿಷಿ ಸಲಹೆ

ಕೊಳ್ಳೇಗಾಲ : ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾನಸೋತ್ಸವ-2024ರಲ್ಲಿ ಖ್ಯಾತ ಚಲನಚಿತ್ರ ನಟ ರಿಷಿ ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಅವರು, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದ ಚಾಮರಾಜನಗರ ಜಿಲ್ಲೆಯ ಸೊಗಡನ್ನು ಕಾಪಾಡಿಕೊಳ್ಳಬೇಕು ಎಂದರು. ಮಾನಸೋತ್ಸವ ಆಯೋಜಕರಾದ ಸಂಸ್ಥೆಯ ಕಾರ್ಯದರ್ಶಿ ಎಸ್.ದತ್ತೇಶ್ ಕುಮಾರ್ ನಮ್ಮ ಕುಟುಂಬದವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ರಿಷಿ ಹೇಳಿದರು.

ಜ. 24 ರಂದು ಬಿಡುಗಡೆಯಾಗಲಿರುವ ನನ್ನ ಸಿನಿಮಾ ‘ರುದ್ರ ಗರುಡ ಪುರಾಣ’ ವನ್ನು ಬೆಳ್ಳಿತೆರೆಯ ಮೇಲೆ ವೀಕ್ಷಿಸಿ ಆಶೀರ್ವದಿಸಬೇಕು ಎಂದು ವಿನಂತಿಸಿದರು. ನಟ ರಿಷಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಮಾನಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಎಸ್.ದತ್ತೇಶ್ ಕುಮಾರ್, ಉಪಾಧ್ಯಕ್ಷೆ ರೂಪಾ, ಆಡಳಿತ ಮಂಡಳಿ ಸದಸ್ಯೆ ಶೋಭಾರಾಣಿ ನಾಗರಾಜು, ವಿಶೇಷ ಅಧಿಕಾರಿ ನಾಗಭೂಷಣ್, ಕ್ಯಾಂಪಸ್ ಸೂಪರವೈಸರ್ ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net