ನೀಟ್, ಕೆಸಿಇಟಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

23kglphoto-1
Published on

ಕೊಳ್ಳೇಗಾಲ: 2022-23ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಹಾಗೂ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಕೆಸಿಇಟಿ)ಉತ್ತಮ ಅಂಕಗಳನ್ನು ಪಡೆದು ಉನ್ನತ ರ್ಯಾಂಕ್ ಗಳಿಸಿರುವ ವಿದ್ಯಾರ್ಥಿಗಳನ್ನು ಲಯನ್ಸ್ ಸಂಯಕ್ತ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಶನಿವಾರ ಸನ್ಮಾನಿಸಿತು.

ನೀಟ್ ಪರೀಕ್ಷೆಯಲ್ಲಿ 562 ಅಂಕ, ಕೆಸಿಇಟಿ(ತಾಂತ್ರಿಕ ವಿಭಾಗ)ಯಲ್ಲಿ ರಾಜ್ಯಕ್ಕೆ 5 ಸಾವಿರ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಸಿ.ಎಸ್.ಲಿಖಿತಾ ಹಾಗೂ ಕೆಸಿಇಟಿ(ತಾಂತ್ರಿಕ ವಿಭಾಗ) 6636 ನೇ ರ್ಯಾಂಕ್, ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 5349ನೇ ರ್ಯಾಂಕ್ ಪಡೆದಿರುವ ಜೆ.ತೃಪ್ತಿ, ಕೆಸಿಇಟಿ ತಾಂತ್ರಿಕ ವಿಭಾಗದಲ್ಲಿ ಉತ್ತಮ ಅಂಕಗಳಿಸಿ ಕಾಲೇಜಿಗೆ ಹಿರಿಮೆ ತಂದಿರುವ ಮೇಘನಾ, ಸ್ನೇಹಾ ರೂತ್, ಮದೀನಾ, ಆಫೀಫಾ ತಬಸುಮ್, ಪ್ರಾರ್ಥನಾ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಲಯನ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಎಸ್. ಮಹದೇವ ಪ್ರಸಾದ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನೀಟ್ ಹಾಗೂ ಕೆಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಹಾಗೂ ಅಂಕ ಪಡೆದಿರುವುದು ಹೆಮ್ಮೆ. ಓದಿನಲ್ಲಿ ಶ್ರದ್ಧೆವಹಿಸಿ ಇಂಥ ಸಾಧನೆ ಮಾಡಿರುವ ವಿದ್ಯಾಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಗೌರವಿಸಿದೆ. ಇಲ್ಲಿನ ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಸಾಧನೆಗೆ ಕಾರಣರಾಗಿದ್ದು ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಪ್ರಾಂಶುಪಾಲೆ ವಿನುತಾ, ಶಿಕ್ಷಕರಾದ ಶ್ಯಾಮ್ ಕುಮಾರ್, ಧನಲಕ್ಷ್ಮೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net