ಕಾಡು ಪ್ರಾಣಿಗಳ ಹಾವಳಿಗೆ ಬೆಳೆ ನಾಶ

9-KGL PHOTO-1,,
Published on

ಕೊಳ್ಳೇಗಾಲ: ತಾಲೂಕಿನ ಜಕ್ಕಳಿ ಗ್ರಾಮದ ಸಮೀಪದ ಜಮೀನಿನಲ್ಲಿ ವನ್ಯಜೀವಿಗಳ ಹಾವಳಿಗೆ 300ಕ್ಕೂ ಹೆಚ್ವು ಬಾಳೆ ಗಿಡಗಳು ನಾಶವಾಗಿದೆ.
ಕೆಂಪನಪಾಳ್ಯ ಗ್ರಾಮದ ಶೈಲೇಂದ್ರ ಶ್ರೀಕಂಠಸ್ವಾಮಿ ಅವರು ಜಕ್ಕಳಿ ಗ್ರಾಮದಲ್ಲಿ 5 ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಶುಕ್ರವಾರ ರಾತ್ರಿ ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ಬಾಳೆಗಿಡಗಳನ್ನು ನಾಶ ಮಾಡಿವೆ.

ಜಮೀನಿನಲ್ಲಿ ನಡೆಸಲಾಗಿದ್ದ ಸುಮಾರು 4500 ಗಿಡಗಳ ಪೈಕಿ 300ಕ್ಕೂ ಹೆಚ್ಚು ಗಿಡಗಳು ಹಾನಿಗೊಳಗಾಗಿದೆ. ಸಂಕಷ್ಟಗಳ ನಡುವೆಯ ಬೆಳೆದಿದ್ದ ಬಾಳೆಯನ್ನು ಕಾಡು ಪ್ರಾಣಿಗಳು ನಾಶ ಮಾಡಿವೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಬೆಳೆ ಹಾನಿಗೊಳಗಾದ ರೈತರು ದೂರು ನೀಡಿದರೆ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ವಹಿಸುತ್ತೇವೆ ಎಂದು ಕೊಳ್ಳೇಗಾಲ ಬಫರ್ ವಲಯದ ಆರ್‌ಎಫ್‌ಒ ಭರತ್ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net