ಪತ್ನಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಪತಿ

Crime Logo
Published on

ಕೊಳ್ಳೇಗಾಲ: ತಾಲ್ಲೂಕಿನ ಟಗರಪುರಮೋಳೆ ಗ್ರಾಮದಲ್ಲಿ ಕುಡಿತಕ್ಕೆ ಹಣ ಕೊಡಲಿಲ್ಲ ಎಂಬ‌ ಕಾರಣಕ್ಕೆ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಪತಿಯನ್ನು ಬಂಧಿಸಿದ್ದಾರೆ.
ಶಿವಮೂರ್ತಿ ಪತ್ನಿಯನ್ನು ಕೊಲೆ‌ ಮಾಡಲು ಮುಂದಾಗಿದ್ದ ಆರೋಪಿ. ಈಕೆಯ ಹೆಂಡತಿ ಕಾವ್ಯ ನೊಂದಮಹಿಳೆ.


ಪ್ರಕರಣದ ಹಿನ್ನಲೆ: ಇದೇ ಗ್ರಾಮದ ಶ್ರೀಕಂಠಮೂರ್ತಿ ಕಳೆದ 12 ವರ್ಷಗಳಿಂದ ಕಾವ್ಯ ಎಂಬುವರ ಜೊತೆ  ವಿವಾಹವಾಗಿ ಸಂಸಾರ ನಡೆಸುತ್ತಿದ್ಧಾನೆ. ಈ‌ ದಂಪತಿಗಳಿಗೆ 10 ವರ್ಷದ ಮಗನಿದ್ದಾನೆ. ಕಾವ್ಯ  ಗಾರ್ಮೆನ್ಸ್  ಕೆಲಸಕ್ಕೆ ಹೋಗಿ ಕುಟುಂಬದ ಸಂಸಾರದ ನಡೆಸುತ್ತಿದ್ದಳು. ಶ್ರೀಕಂಠಮೂರ್ತಿ ಯಾವುದೇ ಕೆಲಸ ಮಾಡದೇ ಸೋಮಾರಿಯಾಗಿದ್ದು  ಜೊತೆಗೆ ಕುಡಿತ ಚಠ ಮೈ ಗೂಡಿಸಿಕೊಂಡಿದ್ದ ಆಗಾಗ್ಗೆ ಕುಡಿಯಲು ಹಣ ಬೇಕೆಂದು ಪತ್ನಿಯನ್ನು ಪೀಡಿಸುತ್ತಿದ್ದ ಇಂದೊಮ್ಮೆ ಇತನ ಕಿರಕುಳ ತಾಳಲಾರದೆ ಕಾವ್ಯ ಆತ್ಮಹತ್ಯೆಗೆ ಯತ್ನಿಸಿದ್ದಳು. ಆ ಸಂಧರ್ಭದಲ್ಲಿ ಪಂಚಾಯತಿ ನಡೆದು ಇನ್ನೂ ಮುಂದೆ ಕಾವ್ಯಳಿಗೆ ತೊಂದರೆ ಕೊಡಬಾರದು ಎಂದು ತಾಕೀತು ಮಾಡಲಾಗಿತ್ತು. ಆಗಿದರೂ ಸಹಾ ಈತ ಕಾವ್ಯಳಿಗೆ ಹಣಕ್ಕಾಗಿ ಪೀಡಿಸುತ್ತಿದ್ದ.

ನೆನ್ನೆ ರಾತ್ರಿ ಹಣ ಕೊಡುವುದಿಲ್ಲವೆಂದು ಕಡಾಕಡಿತವಾಗಿ ಹೇಳಿದಾಗ ಕಾವ್ಯಳ ಕತ್ತು ಇಸುಕಿ ಕೊಲೆ ಮಾಡಲು ಯತ್ನಿಸಿದಾಗ ಈಕೆ ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದವರು ಬಂದು ಅಸ್ವಸ್ಥಳಾಗಿದ್ಧವಳನ್ನು ಆಸ್ಪತ್ರೆಗೆ ಸೇರಿಸಿ, ವಿಚಾರವನ್ನು ಮಾಂಬಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ.ಪಿಎಸ್ಐ ಮಾದೇಗೌಡ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈಗ ಕಾವ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸಂಬಂಧ ಮಾಂಬಳ್ಳಿ‌ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net