

ಕೊಳ್ಳೇಗಾಲ: ತಿರುಪತಿಗೆ ಹೋಗಿ ಒಳಿತಾಗಲೆಂದು ಪ್ರಾರ್ಥಸಿ ಬಂದಿದ್ದ ಕುಟುಂಬಕ್ಕೆ ತನ್ನ ಮನೆಗೆ ಬಂದೊಡನೆ ಶಾಕ್ ಕಾದಿತ್ತು.
ಪಟ್ಟಣದ ಲಯನ್ಸ್ ಶಾಲೆ ಬಳಿಯ ನಿವೃತ್ತ ನಂಜಯ್ಯ ಅವರ ಮನೆ ಬೀಗ ಮುರಿದು ಕಾಲು ಕೆ.ಜಿ ಚಿನ್ನಾಭರಣ ಹಾಗೂ 8 ಸಾವಿರ ರೂ. ಅನ್ನು ಕಳ್ಳತನ ಮಾಡಲಾಗಿದೆ.
ಮನೆಗೆ ಬೀಗ ಹಾಕಿ ಕಳೆದ ಬುಧವಾರ ತಿರುಪತಿಗೆ ಹೋಗಿದ್ದ ನಂಜಯ್ಯ ಅವರ ಕುಟುಂಬ ಶನಿವಾರ ಬೆಳಗ್ಗೆ ಮನೆಗೆ ವಾಪಸ್ಸಾದಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ನಾಗರಾಜು, ಸಿಪಿಐ ಶಿವರಾಜ್ ಆರ್.ಮುಧೂಳ್, ಪಿಎಸ್ ಐ ಗಳಾದ ತಾಜುದ್ದೀನ್, ಮಾದೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.