

ಬೆಳಗಾವಿ(ನಿಪ್ಪಾಣಿ) : ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಔರಂಗಜೇಬ ಮತ್ತು ಟಿಪ್ಪು ಸುಲ್ತಾನ್‌ರನ್ನು ವೈಭವಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದ ವಿವಾದ ಕೋಮುಗಲಭೆಯ ರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತ ಬೆಳಗಾವಿ ಜಿಲ್ಲಾ ಪೊಲೀಸರು ಗುರುವಾರ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ನಿಯೋಜಿಸಿದೆ. ಎಲ್ಲ ಠಾಣೆಗಳಲ್ಲೂ ವಿವಿಧ ಧರ್ಮಗಳ ಮುಖಂಡರ ಶಾಂತಿ-ಸಭೆ ನಡೆಯಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಔರಂಗಜೇಬ್ ಹೊಗಳಿ ಫೋಸ್ಟ್ ಹಾಕಿದ್ದ ಬಾಲಕ ಹಾಗೂ ಆತನ ತಂದೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರನ್ನೂ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಇನ್ನು ನಿಪ್ಪಾಣಿ ನಗರ ಪೊಲೀಸ್ ಠಾಣೆ ಸಿಪಿಐ ಸಂಗಮೇಶ ಶಿವಯೋಗಿ ಅವರಿಗೆ ಇಸ್ಲಾಂ ಧರ್ಮದ ಮುಖಂಡರು ಮನವಿ ನೀಡಿದ್ದು, ಪದೆ ಪದೆ ಧರ್ಮದ ವಿಷಯವಾಗಿ ಉಭಯ ಕೋಮುಗಳ ನಡುವೆ ಇಂತಹ ಘಟನೆಗಳು ನಡೆಯುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುಂತೆ ಕೋರಿದ್ದಾರೆ.
ಗಡಿ ಭಾಗ ಸೇರಿದಂತೆ ಜಿಲ್ಲೆ ಪ್ರತಿ ಠಾಣೆಗಳ ವ್ಯಾಪ್ತಿಯಲ್ಲಿಯೂ ಸಮಾಜದ ಮುಖಂಡರ ಸಭೆ ನಡೆಸಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಸೂಕ್ಷ್ಮತೆ ವಿಚಾರಗಳನ್ನು ಹಂಚಿಕೊಳ್ಳದಂತೆ ಸೂಚಿಸುವುದರ ಜತೆಗೆ ಶಾಂತಿ ಸುವ್ಯವಸ್ಥೆ ಕದಡಿದರೆ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಸಂದರ್ಭದಲ್ಲಿ ಬುಗಿಲೆದ್ದಿರುವ ಈ ವಿವಾದದ ಕೇಂದ್ರ ಬಿಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಹಾರಾಷ್ಟ್ರ ಖಾಕಿ ಪಡೆ ಬೀಡು ಬಿಟ್ಟಿದ್ದು, ಪರಿಸ್ಥಿತಿ ತಿಳಿಗೊಂಡಿದೆ. ಔರಂಗಜೇಬ್ ವೈಭವಿಕರಿಸಿದ್ದವರ ವಿರುದ್ಧ ಕ್ರಮ ಜರಗಿಸಲು ಒತ್ತಾಯಿಸಿ, ಬುಧವಾರ ಕರೆ ನೀಡಲಾಗಿದ್ದ ಕೊಲ್ಲಾಪುರ ಬಂದ್ ವೇಳೆ ಕಲ್ಲು ತೂರಾಟ ನಡೆದು ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ಈ ಘಟನೆಗೆ ಸಂಬಂಸಿದಂತೆ ಮೂವರು ಕಾನೂನು ಸಂಘರ್ಷಕಲ್ಕೊಳಗಾದ ಬಾಲಕರು ಸೇರಿದಂತೆ 36 ಜನರನ್ನು ವಶಕ್ಕೆ ಪಡೆದು ಪೋಲಿಸರು ವಿಚಾರಣೆ ನಡೆಸಿದ್ದಾರೆ.
ಮುಂಜಾಗ್ರತಾ ಕ್ರಮವಹಿಸಿರುವ ಮಹಾರಾಷ್ಟ್ರ ಪೊಲೀಸರು ಕೊಲ್ಲಾಪುರ, ಸಾಂಗ್ಲಿ, ಇಚಲಕರಂಜಿ, ಗಡಹಿಂಗ್ಲಜ, ಆಜರಾ ಸೇರಿದಂತೆ ಹಲವು ಪ್ರದೇಶಗಲ್ಲಿ 400 ಪೋಲಿಸ್ ಪೇದೆಗಳು, 1,500 ಹೋಮ್‌ಗಾರ್ಡ, 6 ಸಿಆರ್‌ಪಿಎ್ ತುಕಡಿ ಸೇರಿದಂತೆ ಎಸ್ ಹಾಗೂ ಪಿಐ 70 ಹಂತದ ಅಧಿಕಾರಿಗಳು ವಿಶೇಷ ನಿಗಾ ವಹಿಸಿದ್ದಾರೆ. ನಿಷೇದಾಜ್ಞೆೆ ಮುಂದುವರೆದಿದ್ದು, ರಾತ್ರಿ 12 ಗಂಟೆಯ ವರೆಗೆ ಇಂಟರನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಓರ್ವ ವಿವಾದಾತ್ಮ ಸ್ಟೇಟಸ್ ಇಟ್ಟಿದ್ದು, ಉಳಿದ ನಾಲ್ವರು ಅದನ್ನು ಹಂಚಿಕೊಂಡಿದ್ದಾರೆ. ಐವರೂ ಜನ ಕಾಲೇಜು ವಿದ್ಯಾರ್ಥಿಗಳು. ಅವರಲ್ಲಿ ಇಬ್ಬರು ಬಾಲಕರಿದ್ದಾರೆ. ಕಲ್ಲು ತೂರಾಟ ಪ್ರಕರಣ ತನಿಖೆಗಾಗಿ ಅಂಗಡಿ ಮುಂಗಟ್ಟುಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಯಿಸಿ ವಿಚಾರಣೆ ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿದ್ದೇವೆ. ಮಹೇಂದ್ರ ಪಂಡಿತ, ಎಸ್‌ಪಿ, ಕೊಲ್ಲಾಪುರ
ಮಹೇಂದ್ರ ಪಂಡಿತ, ಎಸ್‌ಪಿ, ಕೊಲ್ಲಾಪುರ