ಕಲ್ಕತ್ತಾ ವೈದ್ಯ ವಿದ್ಯಾಥಿರ್ನಿ ಅತ್ಯಾಚಾರ, ಕೊಲೆ ಪ್ರಕರಣ

16GDG02
ಗದಗ ಐಎಂಎ ಮುಂಭಾಗದಲ್ಲಿ ಕಲ್ಕತ್ತಾ ವೈದ್ಯ ವಿದ್ಯಾಥಿರ್ನಿ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಡಾ. ಪವನ್​ ಪಾಟೀಲ, ತುಕಾರಾಮ ಸೂರಿ, ಡಾ. ಜಿ. ಬಿ. ಬಿಡಿನಹಾಳ, ಡಾ. ರಾಜಶೇಖರ ಬಳ್ಳಾರಿ ಹಲವರು ಇದ್ದರು.
Published on

ಗದಗ ಐಎಂಎ ವೈದ್ಯರಿಂದ ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಗದಗ
ಕಲ್ಕತ್ತಾದ ಆರ್​.ಜಿ. ವೈದ್ಯಕಿಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾಥಿರ್ನಿಯ ಅತ್ಯಾಚಾರ, ಬರ್ಬರ ಕೊಲೆಯನ್ನು ಖಂಡಿಸಿ ಮತ್ತು ವೈದ್ಯರಿಗೆ ಸುರತೆ ಮತ್ತು ಕಠಿಣ ಕಾನೂನಿಗಾಗಿ ಆಗ್ರಹಿಸಿ ಕಲ್ಕತ್ತಾದ ವೈದ್ಯರು ಹಾಗೂ ವೈದ್ಯ ವಿದ್ಯಾಥಿರ್ಗಳು ಕೈಗೊಂಡಿರುವ ಅಮರಣ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಗದಗ ನಲ್ಲಿ ಐಎಂಎ ವೈದ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕೊಲೆಯಾದ ವಿದ್ಯಾಥಿರ್ನಿಯ ಕುಟುಂಬಕ್ಕೆ ನ್ಯಾಯ, ಪರಿಹಾರ ಒದಗಿಸಬೇಕು. ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕೊಲೆ ನಡೆಸುವ ದುಷ್ಟ ಶಕ್ತಿಗಳ ವಿರುದ್ಧ ಕೇಂದ್ರ ಸರಕಾರ ಕಠಿಣ ಕಾನೂನು ರಚಿಸಿ ತಣದಿಂದ ಜಾರಿಗೊಳಿಸಬೇಕು. ಆಸ್ಪತ್ರೆಗಳನ್ನು ಸುರತ ಪ್ರದೇಶವೆಂದು ಘೋಷಿಸಿ ಅಗತ್ಯ ಕ್ರಮ ಜರುಗಿಸಬೇಕು. ವೈದ್ಯರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ವೈದ್ಯರಿಗೆ ಸಂರ್ಪೂಣ ಸುರತೆ, ಭದ್ರತೆ ಒದಗಿಸಬೇಕು. ಪಶ್ಚಿಮ ಬಂಗಾಳ ರಾಜ್ಯದ ಆರೋಗ್ಯ ಕಾರ್ಯದಶಿರ್ ಹಾಗೂ ಉನ್ನತ ಪೋಲೀಸ್​ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ವೈದ್ಯರು, ವೈದ್ಯ ವಿದ್ಯಾಥಿರ್ಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಮ್ಸ್​ ವೈದ್ಯರು, ವೈದ್ಯ ವಿದ್ಯಾಥಿರ್ಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆ ನಡೆಸಿದರು. ಗದಗ ಐಎಂಎ ಅಧ್ಯ ಡಾ. ಪವನ್​ ಪಾಟೀಲ, ಕಾರ್ಯದಶಿರ್ ತುಕಾರಾಮ ಸೂರಿ, ರಾಷ್ಟ್ರೀಯ ಐಎಂಎ ಉಪಾಧ್ಯ ಡಾ. ಜಿ. ಬಿ. ಬಿಡಿನಹಾಳ, ರಾಜ್ಯ ಐಎಂಎ ನಿಕಟಪೂರ್ವ ಅಧ್ಯ ಡಾ. ರಾಜಶೇಖರ ಬಳ್ಳಾರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net