

ಮೈಸೂರು: ತಮ್ಮ ನಿರ್ದೇಶನದ ‘ಕೋಳಿ ಎಸ್ರು’ ಹಾಗೂ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’ ಚಿತ್ರಗಳು ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಹೆಸರು ತಂದು ಕೊಟ್ಟಿದ್ದು, ಜ.26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿವೆ ಎಂದು ಕೋಳಿ ಎಸ್ರು ಚಿತ್ರ ನಿರ್ದೇಶಕಿ ಚಂಪಾ ಪಿ.ಶೆಟ್ಟಿ ತಿಳಿಸಿದರು.
ಇವೆರಡೂ ಸದಭಿರುಚಿಯ ಚಿತ್ರಗಳಾಗಿರುವ ಕಾರಣ ಸಾಕಷ್ಟು ಪ್ರಶಸ್ತಿ ಪಡೆದುಕೊಂಡಿವೆ. ಆದರೆ ದೊಡ್ಡ ಬಜೆಟ್‌ನ ನಿರ್ಮಾಪಕರ ರೀತಿ ಹೆಚ್ಚು ಖರ್ಚು ಮಾಡಲು ನಮಗೆ ಸಾಧ್ಯವಾಗದಿರುವ ಕಾರಣ ಪ್ರೇಕ್ಷಕರಿರುವೆಡೆಗೇ ಹೋಗಿ ಪ್ರಚಾರ ನಡೆಸುತ್ತಿರುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಟಿ ಅಕ್ಷತಾ ಪಾಂಡವಪುರ, ಸಿ.ಎಂ.ನರಸಿಂಹಮೂರ್ತಿ, ಕೆ.ಎಸ್.ಶಿವರಾಮು, ಧೀರಜ್ ಹಾಗೂ ಅಪೇಕ್ಷಾ ಇದ್ದರು.