ರಸ್ತೆಗಿಳಿಯದ ಬಸ್‌ಗಳು

10 KLR-02
Published on

ಕೊಲ್ಹಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ಬಸ್ ಸಂಚಾರ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ಖಾಸಗಿ ವಾಹನಗಳಿಗೆ ಹೆಚ್ಚಿನ ಹಣ ಕೊಟ್ಟು ಅನಿವಾರ್ಯವಾಗಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಪಟ್ಟಣದ 2 ಬಸ್ ನಿಲ್ದಾಣ ಮತ್ತು ಯುಕೆಪಿ ವೃತ್ತ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ.

ನಿತ್ಯವೂ ಕಾಲೇಜು, ಕಚೇರಿ ಕೆಲಸ, ವ್ಯಾಪಾರ ವಹಿವಾಟು ಹಾಗೂ ಸಂಬಂಧಿಕರ ಶುಭ ಮತ್ತು ಅಶುಭ ಕಾರ್ಯಗಳಿಗೆ ತೆರಳಬೇಕಾದರೆ ನಾಗರಿಕರಿಗೆ ಅದರಲ್ಲೂ ಸಾಮಾನ್ಯ ಬಡಜನತೆಗೆ ತುಂಬಾ ತೊಂದರೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net