ಕೊಲ್ಹಾರದಲ್ಲಿ ಸಂವಿಧಾನ ಜಾಗೃತಿ ಜಾಥಾ

Kolhara, Constitution, Kittoor Rani Channamma Residential School, Digambareshwar Mutt, Human Value, Vijayapura, Kandagalla Hanamantaraya Theatre,
ಕೊಲ್ಹಾರ ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡ ರಾಣಿ ಚನ್ನಮ್ಮ ವಸತಿ ಶಾಲೆ ಮಕ್ಕಳು. ಗೋವಿಂದ ವಾಲಿಕಾರ, ಸಂಜು ದಿವಟಗಿ, ಆನಂದ ಲಮಾಣಿ, ಶ್ರೀಮಂತ ಉಮರಜ, ಎಸ್.ಜಿ.ಗಡದ, ಎಸ್.ಜಿ.ಮೇತ್ರಿ, ಎಸ್.ಪಿ.ಕಂಬಾರ ಇತರರಿದ್ದರು.
Published on

ಕೊಲ್ಹಾರ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆಶ್ರಯದಲ್ಲಿ ಶನಿವಾರ ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು.

ಸ್ಥಳೀಯ ದಿಗಂಬರೇಶ್ವರ ಮಠದಿಂದ ಪ್ರಾರಂಭವಾದ ಜಾಥಾ ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ, ಆಜಾದ್ ನಗರ, ಡಾ.ಅಂಬೇಡ್ಕರ್ ವೃತ್ತ, ಸಂಗಮೇಶ್ವರ ವೃತ್ತದ ಮೂಲಕ ಮರಳಿ ದಿಗಂಬರೇಶ್ವರ ಮಠಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.

ರಾಣಿ ಚನ್ನಮ್ಮ ವಸತಿ ಶಾಲೆ ಮುಖ್ಯಶಿಕ್ಷಕ ಗೋವಿಂದ ವಾಲಿಕಾರ ಮಾತನಾಡಿ, ಸಂವಿಧಾನ ಮಾನವೀಯ ಮೌಲ್ಯಗಳ ಮೂಲಕ ದೇಶದ ಪ್ರಜೆಗಳ ಬದುಕನ್ನು ರಕ್ಷಣೆ ಮಾಡುತ್ತಿದ್ದು, ಘನತೆಯ ಬದುಕನ್ನು ಕಟ್ಟಿಕೊಡುವ ಗ್ರಂಥವಾಗಿದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಅವಿರತವಾಗಿ ಶ್ರಮಿಸುವ ಮೂಲಕ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಬಿ.ಎಂ.ಸಜ್ಜನ ಮಾತನಾಡಿ, ನ.26 ರಂದು ವಿಜಯಪುರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ನಡೆಯುವ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಸಂಜು ದಿವಟಗಿ, ಆನಂದ ಲಮಾಣಿ, ಶ್ರೀಮಂತ ಉಮರಜ, ಎಸ್.ಜಿ.ಗಡದ, ಎಸ್.ಜಿ.ಮೇತ್ರಿ, ಎಸ್.ಪಿ.ಕಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net