ಖಾಸಗಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅಂಡರ್​ಪಾಸ್ ಕಾಮಗಾರಿ ಗುಂಡಿಗೆ ಬಿದ್ದ ಓಮ್ನಿ: ಸ್ಥಳದಲ್ಲೇ ಅಜ್ಜಿ, ಮೊಮ್ಮಗಳ ಸಾವು, ನಾಲ್ವರಿಗೆ ಗಂಭೀರ ಗಾಯ

kolhara taluk accident orange bus and omni two died1 5 MAR 20
Published on

ವಿಜಯಪುರ: ಕೊಲ್ಹಾರ ತಾಲೂಕು ಕೇಂದ್ರದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಒಂದರಲ್ಲಿ ಅಜ್ಜಿ ಮತ್ತು ಮೊಮ್ಮಗಳು ಸಾವನ್ನಪ್ಪಿದ್ದು, ಇತರೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಾಂದಬೀ ಅಂಗಡಿ (45) ಮಹೀರಾಬಾನು‌ ದೊಡಮನಿ (3) ಮೃತ ಅಜ್ಜಿ ಮೊಮ್ಮಗಳು. ನಾಲ್ವರು ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲ್ಹಾರ ಪಟ್ಟಣದ ಯುಕೆಪಿ ವೃತ್ತದಲ್ಲಿ ನಡೆಯುತ್ತಿರುವ ಅಂಡರ್​ಪಾಸ್ ಕಾಮಗಾರಿ ಗುಂಡಿಗೆ ಓಮ್ನಿ ವ್ಯಾನ್​ ಬಿದ್ದು ಈ ಅಪಘಾತ ಸಂಭವಿಸಿದೆ. ಅಂಡರ್​ಪಾಸ್ ಕಾಮಗಾರಿ ಸ್ಥಳದ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಓಮ್ನಿ ವ್ಯಾನ್ ನಿನ್ನೆ ರಾತ್ರಿ ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಖಾಸಗಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪಘಾತವೆಸಗಿದ ಆರೆಂಜ್ ಕಂಪನಿಯ ಖಾಸಗಿ ಬಸ್ಸನ್ನು ವಶಪಡಿಸಿಕೊಂಡಿದ್ದಾರೆ. ಅಪಘಾತವಾದ ಕೂಡಲೇ ಬಸ್ ಚಾಲಕ ತಲೆಮರೆಸಿಕೊಂಡಿದ್ದಾನೆ. ಅಂಡರ್​ಪಾಸ್ ಕಾಮಗಾರಿ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಸರಿಯಾದ ಅವಕಾಶ ಒದಗಿಸದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net