ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಳ

KLR-13-1
Published on

ಕೊಲ್ಹಾರ: ಪ್ರಶಸ್ತಿಗಳು ದೊರಕುವುದರಿಂದ ಪ್ರಶಸ್ತಿ ಪುರಸ್ಕೃತರ ಜವಾಬ್ದಾರಿಗಳು ಹೆಚ್ಚಾಗುತ್ತವೆ ಎಂದು ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀಶೈಲ ಬ. ಪತಂಗಿ ಹೇಳಿದರು.

ಪಟ್ಟಣದ ಶಿವನಿಲಯದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಜವಳಿ ವ್ಯಾಪಾರಸ್ಥರಿಂದ ಹಮ್ಮಿಕೊಂಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗದೀಶ ಸಾಲಳ್ಳಿ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

ಶಿಕ್ಷಕ ಜಗದೀಶ ಸಾಲಳ್ಳಿ ಅವರ ಕ್ರಿಯಾಶೀಲತೆ, ಪ್ರಾಮಾಣಿಕತೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯವರು ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದು ಬಹಳ ಸಂತೋಷವಾಗಿದೆ ಎಂದರು.

ಜಗದೀಶ ಸಾಲಳ್ಳಿ ಮಾತನಾಡಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದರು.

ಸಾಹಿತ್ಯ ಪರಿಷತ್ ಕೊಲ್ಹಾರ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕುಬಕಡ್ಡಿ, ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ ಉಮರಾಣಿ ಮಾತನಾಡಿದರು.

ಕೊಲ್ಹಾರ ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಶ್ರೀಶೈಲ ಬೆಳ್ಳುಬ್ಬಿ, ಗಿರೀಶ ಕುಲಕರ್ಣಿ, ಶಂಕರ ಯಂಕಂಚಿ, ಮಲ್ಲಿಕಾರ್ಜುನ ರುದ್ರಮಣಿ, ವೈ.ಜಿ. ಶಿರೋಳ, ಬಿ.ಜೆ.ಹಿಕ್ಕನಗುತ್ತಿ, ಬಸವರಾಜ ಅಪ್ಪಣ್ಣವರ, ಎಸ್.ಎಸ್.ಪತಂಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net