ನೂತನ ನಿರ್ದೇಶಕರಿಗೆ ಸನ್ಮಾನ

KLR 14-1
Published on

ಕೊಲ್ಹಾರ: ಪಟ್ಟಣದ ಎಂಪಿಎಸ್ ಶಾಲೆ ಸಭಾ ಭವನದಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಘಟಕದ 2020-25 ಅವಧಿಯ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಸ್ಥಳೀಯ ಶಾಲೆ ಮುಖ್ಯ ಶಿಕ್ಷಕ ಎಂ.ಎಸ್. ಕೋಲಕಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕಿನ ಹಿರಿಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಆಗಮಿಸಿದ್ದರು.

ನೂತನ ನಿರ್ದೇಶಕರಾದ ಎ.ಆರ್. ಗಿಡ್ಡಪ್ಪಗೋಳ, ಡಿ.ಎಸ್. ನಾಯಕ, ಜಿ.ಆರ್. ಹೊಸಮನಿ, ಎಂ.ಎಚ್. ಜಮುನಾ, ಎಸ್.ಆರ್. ಬಿರಾದಾರ, ಜೆ.ಎಸ್. ಹೊಸಮನಿ, ಜಿ.ಜಿ. ಕುಲಕರ್ಣಿ, ಟೀಚರ್ ಸೊಸೈಟಿ ನಿರ್ದೇಶಕ ಎಸ್.ಪಿ. ಮಡಿಕೇಶ್ವರ, ಎಸ್.ಎಂ. ಬಾಟಿ, ವಲಯದ ಶಿಕ್ಷಣ ಸಂಯೋಜಕ ಜಿ.ಎಸ್. ಗಣಿಯವರ, ಎಸ್.ಎಸ್. ಮಾದರ, ಎಸ್.ಸಿ/ ಎಸ್.ಟಿ ನೌಕರರ ತಾಲೂಕು ಅಧ್ಯಕ್ಷ ಎನ್.ಎ. ಬನಸೋಡೆ ಅವರನ್ನು ಸನ್ಮಾನಿಸಲಾಯಿತು.

ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸರ್ವ ಶಿಕ್ಷಕರು ಹಾಜರಿದ್ದರು. ಭವಾನಿ ಗೌಡ ಪ್ರಾರ್ಥಿಸಿದರು. ಎಸ್.ಕೆ. ಕವಿಶೆಟ್ಟಿ ಸ್ವಾಗತಿಸಿದರು. ಟಿ.ಪಿ. ದಳವಾಯಿ ನಿರೂಪಿಸಿದರು. ಎಚ್.ಬಿ. ನ್ಯಾಮಗೌಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net