

ಕೊಲ್ಹಾರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವಿ ಶಿರಗುಪ್ಪಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಪದಾಧಿಕಾರಿ ಸುಲೆಮಾನ ದಿಂದಾರ, ಪಟ್ಟಣ ಪಂಚಾಯತಿ ಕೊಲ್ಹಾರ ವತಿಯಿಂದ ಯಾವುದೇ ಸರ್ಕಾರಿ ಸೌಲಭ್ಯಗಳು ಇನ್ನುವರೆಗೆ ತಲುಪಿಲ್ಲ. ತುರ್ತಾಗಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘಕ್ಕೆ ಧನ ಸಹಾಯ ಮಾಡುವುದು, ಪಪಂ ವ್ಯಾಪ್ತಿಯಲ್ಲಿ ಬರುವ ಸ್ವಂತ ಕಟ್ಟಡ ಹೊಂದಿದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರ‌್ಯಾಂಪ್ ನಿರ್ಮಿಸುವುದು, ಪಪಂ ಅನುದಾನದಲ್ಲಿ ಸರ್ಕಾರ ಆದೇಶ ಪ್ರಕಾರ ಶೇ. 5 ರಷ್ಟು ಅನುದಾನ ಅಂಗವಿಕಲರ ಸಬಲೀಕರಣಕ್ಕೆ ಖರ್ಚು ಮಾಡುವುದು, ಸಾಧನ ಸಲಕರಣೆಗಳನ್ನು ನೀಡುವುದು, ತೀವ್ರ ಪ್ರಮಾಣದ ಅಂಗವಿಕಲತೆ ಹೊಂದಿದ ಅಂಗವಿಕಲರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ನೀಡುವುದು, ಪಪಂ ಕಚೇರಿಯಲ್ಲಿ ಅಂಗವಿಕಲರಿಗೆ ತುರ್ತಾಗಿ ಅವರ ಕೆಲಸ ಮಾಡಿಕೊಡುವುದು. ಈ ಎಲ್ಲ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕೆಂದು ವಿನಂತಿಸಿಕೊಂಡರು.
ಪಪಂ ಸದಸ್ಯ ಅಲ್ಲಾಭಕ್ಷ ಬಿಜಾಪುರ, ಕಮತಗಿ, ಹವಾಲ್ದಾರ್, ಮನ್ನಾಬಾಯಿ ಮತ್ತಿತರರಿದ್ದರು.