

ಮಮದಾಪುರ: ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾತ್ರ ತುಂಬ ಮುಖ್ಯವಾಗಿದೆ. ಕೊಳವಿ ಗ್ರಾಮಸ್ಥರು ಜವಾಬ್ದಾರಿಯಿಂದ ಶಾಲಾ ಅಭಿವದ್ಧಿಗೆ ಶ್ರಮಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಮೀಪದ ಕೊಳವಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಶಾಲಾ ಕಟ್ಟಡ ಹಾಗೂ ಶತಮಾನೋತ್ಸವದ ಎರಡನೆಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಶಾಲೆಯಲ್ಲಿ ಪಾಠ ಮಾಡಿದ ಶಿಕರು ಹಲವಾರು ಪ್ರತಿಭಾವಂತವರನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ನಮ್ಮ ಇಲಾಖೆಯಿಂದ ಶಾಲೆಗೆ ಎರಡು ಕೊಠಡಿ ನಿರ್ಮಿಸಲಾಗುವುದು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದಷ್ಟಿಯಿಂದ ಸಮೀಪದ ಖನಗಾಂವ ಗ್ರಾಮದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.
ಸಚಿವರು ಗ್ರಾಮದ ಬಸ್ ತಂಗುದಾಣ ಹಾಗೂ ಬಸ್ ನಿಲ್ದಾಣದಿಂದ ಗ್ರಾಮದ ಗೂಳಿ ಬಸವೇಶ್ವರ ದೇವಸ್ಥಾನದವರೆಗೆ ನಿರ್ಮಾಣಗೊಂಡ ಡಾಂಬರೀಕರಣ ರಸ್ತೆ ಉದ್ಘಾಟಿಸಿದರು. ಬಳಿಕ ಡೊಳ್ಳು ಕುಣಿತ ಹಾಗೂ ಸಕಲವಾದ್ಯಮೇಳದೊಂದಿಗೆ ಶಾಲೆ ಶತಮಾನೋತ್ಸವ ಆಚರಣೆಯ ವೇದಿಕೆಗೆ ಅವರನ್ನು ಬರಮಾಡಿಕೊಳ್ಳಲಾಯಿತು.
ಸಾನ್ನಿಧ್ಯ ವಹಿಸಿದ್ದ ಕುಷ್ಟಗಿಯ ಅಭಿನವ ಕರಿಬಸವ ಶಿವಾಚಾರ್ಯರು, ಕಪರಟ್ಟಿಯ ಬಸವರಾಜ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಎಸ್ಡಿಎಂಸಿ ಅಧ್ಯ ಶಿವಾನಂದ ಮಮದಾಪುರ ಅಧ್ಯತೆ ವಹಿಸಿದ್ದರು. ಪ್ರಗತಿಪರ ರೈತ ಮಹಿಳೆ ಉಮಾಶಂಕರ ಮಿಶ್ರಾ ಹಾಗೂ ತಹಸೀಲ್ದಾರ್ ಮೋಹನ ಭಸ್ಮೆ ಪ್ರಾಸ್ತಾವಿಕ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು. ಹಳೆಯ ಹಾಗೂ ಈಗಿನ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ನತ್ಯ ಜರುಗಿತು. ಶತಮಾನೋತ್ಸವ ಯಶಸ್ವಿಗೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸುವ ಮೂಲಕ ಶತಮಾನೋತ್ಸವ ಆಚರಣೆ ಸವಿ ನೆನಪಿನ ಕಾಣಿಕೆ ನೀಡಲಾಯಿತು.
ಹೂಲಿಕಟ್ಟಿ ಶಿವಲಿಂಗೇಶ್ವರ ಮಠದ ಕುಮಾರ ಸ್ವಾಮೀಜಿ, ತವಗದ ಬಾಳಯ್ಯ ಸ್ವಾಮೀಜಿ, ಗ್ರಾಪಂ ಅಧ್ಯ ಕರೆಪ್ಪ ಬಡಿಗವಾಡ, ತಾಪಂ ಇಒ ಪರಶುರಾಮ ಸ್ತೆ, ಕ್ಷೇತ್ರ ಶಿಣಾಧಿಕಾರಿ ಜಿ.ಬಿ.ಬಳಗಾರ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯ ಬಸನಗೌಡ ಪಾಟೀಲ, ಪ್ರೌಢಶಾಲೆ ಮುಖ್ಯಶಿಕ ಎಂ.ಬಿ.ಮುತ್ನಾಳ, ಗ್ರಾಮದ ಗುರುಹಿರಿಯರು, ಎಸ್ಡಿಎಂಸಿ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಬಾಳಯ್ಯ ಪೂಜೇರಿ ಸ್ವಾಗತಿಸಿದರು. ಸಂಜಯ ಹಿರಟ್ಟಿ ವಂದಿಸಿದರು.