ಮ.ಬೆಟ್ಟದಲ್ಲಿ ತಮಿಳುನಾಡು ಭಕ್ತರ ಕೋಲಾಟ

08 HANUR 4
ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದ ಮುಂಭಾಗ ತಮಿಳುನಾಡಿನ ಹೊಸೂರು ತಾಲೂಕಿನ ಜೂಜುವಾಡಿ ಗ್ರಾಮದ ಮಹಿಳೆಯರು ಕೋಲಾಟವನ್ನು ಪ್ರದರ್ಶಿಸಿದರು.
Published on

ಮಹದೇಶ್ವರಬೆಟ್ಟ : ವಿಶ್ಯವಿಖ್ಯಾತ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ತಮಿಳುನಾಡಿನ ಮಹಿಳಾ ಭಕ್ತರು ಶುಕ್ರವಾರ ಕೋಲಾಟ ಪ್ರದರ್ಶನ ನೀಡಿ ಗಮನ ಸೆಳೆದರು. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ತಾಲೂಕಿನ ಜೂಜುವಾಡಿ ಗ್ರಾಮದ 50ಕ್ಕೂ ಹೆಚ್ಚು ಭಕ್ತರು ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರು. ಇದರಲ್ಲಿ 25 ಮಹಿಳಾ ಭಕ್ತರಿದ್ದರು. ಮೊದಲ ಬಾರಿಗೆ ಮ.ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದರು. ಬಳಿಕ ದೇಗುಲದ ಮುಂಭಾಗದಲ್ಲಿ ಮಹಿಳೆಯರ ತಂಡ ಜನಪದ ಗೀತೆಗೆ ಕೋಲಾಟದ ನೃತ್ಯವನ್ನು ಪ್ರದರ್ಶಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ನೃತ್ಯಕ್ಕೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net