

ಕೋಲಾರ: ನಗರ ದೇವತೆ ಶ್ರೀ ಕೋಲಾರಮ್ಮದೇವಿ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಬ್ರಹ್ಮರಥೋತ್ಸವ ಅಂಗವಾಗಿ ದೇವರಿಗೆ ಅಭಿಷೇಕ, ರಥ ಶಾಂತಿ, ರಥ ಬಲಿ, ಆಚಾರ್ಯ ಪೂಜೆ, ಪ್ರಸಾದ ಸೇವೆ ನಡೆಯಿತಲ್ಲದೆ, ನಗರದ ಪ್ರಮುಖ ರಸ್ತೆಗಳಲ್ಲಿ ಬ್ರಹ್ಮರಥೋತ್ಸವ ಸಂಚರಿಸಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ನೂರಾರು ಜನರು ಕೋಲಾರಮ್ಮನಿಗೆ ಜೈ ಎಂಬ ಜಯ ಘೋಷಣೆಯೊಂದಿಗೆ ಭಕ್ತಿ ಪರವಶವಾಗಿ ರಥವನ್ನು ಎಳೆದರಲ್ಲದೆ, ದಾರಿಯುದ್ದಕ್ಕೂ ಭಕ್ತರು ದವನ, ಬಾಳೆ ಹಣ್ಣುಗಳನ್ನು ರಥದ ಮೇಲೆ ಎಸೆಯುವ ಮೂಲಕ ಹರಕೆ ತೀರಿಸಿದರು.ರಾತ್ರಿ ಧೂಳೋತ್ಸವ ನಡೆಯಿತು.
ದೇವಾಲಯದಲ್ಲಿ ನಡೆದ ಎಲ್ಲಾ ಪೂಜಾ ಕಾರ್ಯಗಳನ್ನು ಪ್ರಧಾನ ಅರ್ಚಕ ಸಿ.ಸೋಮಶೇಖರ್ ದೀಕ್ಷಿತ್, ಕಾರ್ತಿಕ್ ದೀಕ್ಷಿತ್, ವಿನಯ್ ದೀಕ್ಷಿತ್ ನೆರವೇರಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಬಜರಂಗದಳ ಮುಖಂಡರು ರಥೋತ್ಸವದ ಅಂಗವಾಗಿ ನಗರದ ಎರಡು ಕಡೆಗಳಲ್ಲಿ ಪಾನಕ,ಮಜ್ಜಿಗೆ, ಕೋಸಂಬರಿ ವಿತರಿಸಿದರು. ಕಾರ್ಯಕರ್ತರು ಕೋಲಾರಮ್ಮನಿಗೆ ಬಾಗಿನಾ ಅರ್ಪಿಸುವ ಮೂಲಕ ರಥ ಎಳೆಯುವ ಮೂಲಕ ತಾಯಿಗೆ ಪೂಜೆ ಸಲ್ಲಿಸಿದರು.
ಮುಖಂಡರಾದ ಬಜರಂಗ ದಳ ಬಾಲಾಜಿ, ಕೋಟೆ ರಾಜೇಶ್, ಸುಮನ್, ನಾಗೇಂದ್ರ, ಜಗದೀಶ್, ರವೀಶ್, ಸುಮನ್ಸಿಂಗ್, ಪುಟ್ಟರಾಜು, ಮಣಿ, ಆನಂದ್, ಗೋವಿಂದ, ಪೈ, ಮಧುಕರ್, ಎಸ್.ಓ.ಮಂಜುನಾಥ್, ಸೋಮಶೇಖರ್, ಶರತ್, ಜಯಚಂದ್ರ, ಆದಿತ್ಯ, ನಾರಾಯಣಸ್ವಾಮಿ ದಾರಿಯಲ್ಲಿ ಭಕ್ತರಿಗೆ ಪ್ರಸಾದ, ಮಜ್ಜಿಗೆ, ಪಾನಕ ವಿತರಿಸಿದರು.
22ಕೋಲಾರ5
ಕೋಲಾರ ನಗರ ದೇವತೆ ಶ್ರೀ ಕೋಲಾರಮ್ಮ ದೇವಿ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.