ಗಲಭೆ ನಡೆಸಲು ಜಲ್ಲಿ ಕಲ್ಲು ಶೇಖರಿಸಿಟ್ಟಿದ್ದ ಇಬ್ಬರು ಯುವಕರ ಬಂಧನ

kolara new
Published on

ಕೋಲಾರ: ಕೋಮು ಗಲಭೆ ನಡೆಸಲು ಜಲ್ಲಿ ಕಲ್ಲು ಶೇಖರಿಸಿಟ್ಟಿದ್ದ ಇಬ್ಬರು ಯುವಕರನ್ನು ಕೋಲಾರ ನಗರ ಠಾಣೆ ಪೊಲೀಸರು ಗುರುವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರನ್ನು ಕೋಲಾರದ ಶಫೀದ್, ಜಾವಿದ್ ಎಂದು ಗುರುತಿಸಲಾಗಿದೆ. ಜ.4 ರಂದು ಬಿಜೆಪಿ, ಭಾರತೀಯ ಹಿತರಕ್ಷಣಾ ವೇದಿಕೆ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಸಭೆ ಹಮ್ಮಿಕೊಂಡಿತ್ತು. ಸಭೆ ದಿನ ಕಲ್ಲು ತೂರಾಟ ನಡೆಸಿ ಕೋಮು ಗಲಭೆ ಎಬ್ಬಿಸಲು ಐವರು ಯುವಕರು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಜ.3 ರಂದು ರೈಲ್ವೆ ಹಳಿಗಳ ಬಳಿ ಚೀಲಗಳಲ್ಲಿ ಕಲ್ಲುಗಳನ್ನು ಶೇಖರಿಸಿ ಗಾಡಿಗಳಿಗೆ ತುಂಬಿಸುತ್ತಿದ್ದರು. ಬಂಧಿತರಿಂದ ಪಲ್ಸರ್ ಬೈಕ್​, ಗೋಣಿ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಮೂವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net