ಕಡವೆ ಬೇಟೆಯಾಡಿದವನ ಬಂಧನ

ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಸಮೀಪದ ಗುಂಟಪಲ್ಲಿ ಅರಣ್ಯ ಪ್ರದೇಶದಲ್ಲಿ ಕಡವೆಗಳಿಗೆ ವಿದ್ಯುತ್​ ಶಾಕ್​ ನೀಡಿ ಸಾಯಿಸುತ್ತಿದ್ದ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
mutton sale
ಶ್ರೀನಿವಾಸಪುರ ತಾಲೂಕು ಗುಂಟಪಲ್ಲಿ ಅರಣ್ಯ ಪ್ರದೇಶದಲ್ಲಿ ಕಡವೆಗಳ ಬೇಟೆಯಾಡಿದ ಆರೋಪಿಯನ್ನು ಬಂಧಿಸಿ, ಮಾಂಸ ವಶಕ್ಕೆ ಪಡೆದಿರುವುದು. ವಲಯ ಅರಣ್ಯಾಧಿಕಾರಿ ವಾಸುದೇವ ಮೂರ್ತಿ, ಉಪವಲಯ ಅರಣಾಧಿಕಾರಿ ಅನಿಲ್​ಕುಮಾರ್​, ಎಸ್​. ಎನ್​. ಮಂಜುನಾಥ್​, ನವೀನ್​ಕುಮಾರ್​, ಬೀಟ್​ ಫಾರೆಸ್ಟ್​ ಮೋಹನ್​ ಸಿಂಗ್​, ಜಮೀರ್​ ಪಾಷಾ, ಅರಣ್ಯ ವೀಕ ಕೆ.ಎಂ. ನಾಸಪ್ಪ ಇದ್ದರು.
Published on: 

ರಾಯಲ್ಪಾಡು: ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಸಮೀಪದ ಗುಂಟಪಲ್ಲಿ ಅರಣ್ಯ ಪ್ರದೇಶದಲ್ಲಿ ಕಡವೆಗಳಿಗೆ ವಿದ್ಯುತ್​ ಶಾಕ್​ ನೀಡಿ ಸಾಯಿಸುತ್ತಿದ್ದ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಸದಾನಂದ ನಾಯಕ್​ ಬಂಧಿತ.

ಸುಬ್ರಮಣಿ , ಸತ್ಯಂ ಎಂಬ ಆರೋಪಿಗಳಿಬ್ಬರು ತಲೆಮರಿಸಿಕೊಂಡಿದ್ದು, ಬಂಧನಕ್ಕೆ ತಂಡ ರಚಿಸಲಾಗಿದೆ. ಆರೋಪಿಯಿಂದ ಎರಡು ಮೊಬೈಲ್​, ಕೃತ್ಯಕ್ಕೆ ಬಳಕೆ ಮಾಡಿದ ಆಯುಧಗಳು, 150 ರಿಂದ 200 ಕೆಜಿ ಕಡವೆ ಮಾಂಸ ವಶಪಡಿಸಿಕೊಂಡಿದ್ದಾರೆ.