ಯರಗೋಳ್ ಡ್ಯಾಂ ನಿರ್ವಹಣೆದ್ದೇಗೊಂದಲ!

ಯರಗೋಳ್ ಜಲಾಶಯ
ಯರಗೋಳ್ ಜಲಾಶಯ
Published on
ಕಿರುವಾರ ಎಸ್.ಸುದರ್ಶನ್ ಕೋಲಾರ
ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಿರುವ ಯರಗೋಳ್ ಡ್ಯಾಂನ ಬಳಕೆಯಾಗುತ್ತಿದೆಯಾದರೂ ಈಗ ಅಧಿಕಾರಿಗಳಿಗೆ ನಿರ್ವಹಣೆಯದೇ ಚಿಂತೆಯಾಗಿದೆ. ನೀರು
ಬಂಗಾರಪೇಟೆ ತಾಲೂಕು ಯರಗೋಳ್ ಭಾಗದಲ್ಲಿ ಬಿದ್ದ ಮಳೆಯ ನೀರು ತಮಿಳುನಾಡಿಗೆ ಹರಿದು ಹೋಗುವುದನ್ನು ತಪ್ಪಿಸಲು ಜನಪ್ರತಿನಿಧಿಗಳು ಯರಗೋಳ್ ಯೋಜನೆ ರೂಪಿಸಿ, ಸುಮಾರು 375.37 ಕೋಟಿ ರೂ. ವೆಚ್ಚದಲ್ಲಿ 500 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಪೈಪ್‌ಲೈನ್ ಮೂಲಕ ಬಂಗಾರಪೇಟೆ, ಮಾಲೂರು ಹಾಗೂ ಕೋಲಾರ ನಗರಸಭೆ ಹಾಗೂ 45 ಗ್ರಾಮಗಳಿಗೆ ಕುಡಿಯುವ ಬಳಕೆಗಾಗಿ ಪೂರೈಕೆ ಮಾಡಲಾಗುತ್ತಿದೆ.
ನೀರು ಪೂರೈಕೆಗೆಂದೇ ಅಳವಡಿಸಲಾದ ಜಾಕ್‌ವೆಲ್, ಪಂಪ್‌ಸೆಟ್ ಹಾಗೂ 813 ಮಿಮೀ ವ್ಯಾಸದ ಎಂಎಸ್ ಕೊಳವೆ ಮಾರ್ಗವನ್ನು ಕರ್ನಾಟಕ ನಗರ ನೀರು ಸಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣೆಗೆ ನೀಡಿ, ಈ ನಿರ್ವಹಣೆಗೆ ವಾರ್ಷಿಕ ತಗಲುವ ವೆಚ್ಚವನ್ನು ಮೂರು ಸ್ಥಳೀಯ ಸಂಸ್ಥೆಗಳಿಂದ ಪಾವತಿಸುವ ಬಗ್ಗೆ ಚರ್ಚೆಯಾಗುತ್ತಿದೆ. ವಾರ್ಷಿಕ ತಗಲುವ ವೆಚ್ಚಕ್ಕೆ ಅಂದಾಜು ಪಟ್ಟಿ ತಯಾರಿಸಿ ಮಂಡಳಿಯ ಕಾರ್ಯಪಾಲಕ ಅಭಿಯಂತರು, ರಾಜ್ಯ ಮುಖ್ಯ ಅಭಿಯಂತರಿಗೆ ಸಲ್ಲಿಸಿದ್ದಾರೆ. ಆದರೆ ಚರ್ಚೆಯಂತೆ ಇದರ ಜವಾಬ್ದಾರಿ ಯಾರು ವಹಿಸಿಕೊಳ್ಳಬೇಕು ಎಂಬುದು ಅಧಿಕಾರಿಗಳ ಗೊಂದಲಕ್ಕೆ ಕಾರಣವಾಗಿದೆ.
ಅಂದಾಜು ಪಟ್ಟಿ ತಯಾರಿ
2026-27ನೇ ಸಾಲಿಗೆ ಯರಗೋಳ್ ಅಣೆಕಟ್ಟಿನಿಂದ ಬಂಗಾರಪೇಟೆಯ ಡಬ್ಲ್ಯುಟಿಪಿಗೆ ಏರುತ್ತಿರುವ ಹೌಸಿಂಗ್‌ ಚೇಂಬರ್, ಪಂಪಿಂಗ್ ಯಂತ್ರೋಪಕರಣಗಳು, ಟ್ರಾನ್ಸ್‌ಫಾರ್ಮರ್, ವಿದ್ಯುತ್ ಉಪಕರಣಗಳು ಮತ್ತು 813 ಎಂಎಂ ವ್ಯಾಸದ ಎಂಎಸ್ ನೀರಿನ ಮುಖ್ಯ ಕೊಳವೆ ಮಾರ್ಗದ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ವಾರ್ಷಿಕವಾಗಿ 22 ಕೋಟಿ ರೂಪಾಯಿಗೆ ಅಂದಾಜು ಪಟ್ಟಿ ತಯಾರಿಸಿ, ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಆದರೆ ಅಲ್ಲಿಂದ ಜಿಲ್ಲಾಮಟ್ಟದಲ್ಲಿಯೇ ನಿರ್ವಹಣೆಗೆ ಹಣ ಹೊಂದಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಅಣೆಕಟ್ಟು, ಡ್ಯಾಂ ಕೊಠಡಿ ಆವರಣ, ಮುಖ್ಯ ಜೋಡಣೆಯಲ್ಲಿ ಗಿಡ-ಗಂಟಿ ಶುಚಿಗೊಳಿಸುವುದು, ನೀರೆತ್ತುವ ಪಂಪ್‌ಸೆಟ್ ಮತ್ತು ಸಂಬಂಧಿತ ಎಲೆಕ್ಟ್ರಾನಿಕ್ ಯಂತ್ರಗಳ ನಿರ್ವಹಣೆ ಹಾಗೂ ಸಿಬ್ಬಂದಿ ವೇತನಕ್ಕೆ ತಗಲುವ ವೆಚ್ಚಕ್ಕೆ ಪಟ್ಟಿ ಸಲ್ಲಿಸಲಾಗಿದೆ.
ನೀರಿನ ಬೇಡಿಕೆ
ఒట్టు 500 ಎಂಪಿಸಿಎಫ್ಟಿ ಡ್ಯಾ ಸಾಮರ್ಥವಾಗಿದ್ದು, ಇರುವ 2039 ಎಂಎಲ್ಡಿ ಬೇಡಿಕೆಗೆ ತಕ್ಕಂತಡ ಕೋಲಾರ ನಗರಸಭೆಗೆ 23.47, ಬಂಗಾರಪೇಟೆ ನಗರಸಭೆಗೆ 5.81 ಹಾಗೂ ಮಾಲೂರು ನಗರಸಭೆಗೆ 4.04 2 0 2 33.32 ಎಂಎಲ್‌ಡಿ ಹಂಚಿಕೆ ಮಾಡಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳೇ ಭರಿಸಿಕೊಳ್ಳಲು ನಿರ್ದೇಶನ
ಮೂರು ಸ್ಥಳೀಯ ಸಂಸ್ಥೆಗಳ ಠೇವಣಿ ನೀಡುವ ಆಧಾರದ ಮೇರೆಗೆ ವಾರ್ಷಿಕ ನಿರ್ವಹಣೆ ನಿರ್ವಹಿಸಲು ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾ ಮಂಡಳಿಯು ರಾಜ್ಯ ಮಂಡಳಿಗೆ ಸಲ್ಲಿಸಿದ್ದು, ಇದಕ್ಕೆ ರಾಜ್ಯ ಮುಖ್ಯ ಅಭಿಯಂತರು, ಜಿಲ್ಲಾಧಿಕಾರಿಗೆ ಪತ್ರ ಬರೆದು ಅಂದಾಜು ಪಟ್ಟಿಯ ಮೊತ್ತವನ್ನು ಮೂರು ಸ್ಥಳೀಯ ಸಂಸ್ಥೆಗಳಿಂದ ಭರಿಸಿಕೊಳ್ಳಲು ಅನುಮೋದನೆಗಾಗಿ ಹಾಗೂ ಮುಂದಿನ ಆದೇಶಕ್ಕಾಗಿ ನಿರ್ದೇಶಿಸಿದ್ದಾರೆ.
ಖಾಸಗಿ ಟ್ಯಾಂಕರ್ ಮಾಫಿಯಾ ಶುರು
ಯರಗೋಳ್ ನೀರು ಸಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಖಾಸಗಿ ಟ್ಯಾಂಕ‌ರ್ ಮಾಫಿಯಾ ಶುರುವಾಗಿದೆ. ಒಂದು ಟ್ಯಾಂಕ‌ರ್ ನೀರು 400ರಿಂದ 500 ಇದ್ದ ದರ ಈಗ 700ರಿಂದ 800 ರೂ. ಆಗಿದೆ. ಸ್ಥಳೀಯ ಸಂಸ್ಥೆಯಿಂದ ಸಕಾಲಕ್ಕೆ ನೀರು ಸರಬರಾಜು ಆಗದಿರುವುದು ಮಾಫಿಯಾಗೆ ಕಾರಣವಾಗಿದೆ.
ಜಿಲ್ಲೆಯ ಜನತೆಗೆ ಕುಡಿಯುವ ನೀರು ಒದಗಿಸುವ ಮೂಲವಾಗಿದೆ. ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮವಹಿಸಲಾಗುವುದು.
- ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ
ಡ್ಯಾಂನಲ್ಲಿ ನೀರು ಕಡಿಮೆ ಯಾಗಿರುವುದರಿಂದ ಸಮರ್ಪಕವಾಗಿ ವಾರ್ಡ್‌ಗಳಿಗೆ ಸರಬರಾಜು ಮಾಡಲಾಗುತ್ತಿಲ್ಲ. ಮೀನು ಹಿಡಿಯುವವರು ನೀರನ್ನು ಕಲುಷಿತಗೊಳ್ಳಿಸಿದ್ದು, ಪಂಪ್‌ಗಳಲ್ಲಿ ಜೊಂಡು ಸಿಕ್ಕಾಕ್ಕಿಕೊಂಡು ರಿಪೇರಿಗೆ ಬರುತ್ತಿವೆ. ಸಮರ್ಪಕವಾಗಿ ಬಡಾವಣೆಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲ.
- ರಾಕೇಶ್, ಮಾಜಿ ಸದಸ್ಯ, ನಗರಸಭೆ ಕೋಲಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net