ಹಾಸ್ಟೆಲ್‌ ಅನ್ನದಲ್ಲಿ ಹುಳು ಪತ್ತೆ!

ಹಾಸ್ಟೆಲ್‌ ಅನ್ನದಲ್ಲಿ ಹುಳು ಪತ್ತೆಯಾಗಿರುವುದು
ಹಾಸ್ಟೆಲ್‌ ಅನ್ನದಲ್ಲಿ ಹುಳು ಪತ್ತೆಯಾಗಿರುವುದು
Published on
ಕೋಲಾರ: ಚಿಕ್ಕಹಸಾಳ ಸಮೀಪದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮಕ್ಕಳಿಗೆ ನೀಡುವ ಅನ್ನದಲ್ಲಿ ಹುಳುಗಳು ಪತ್ತೆಯಾಗಿವೆ.
ಕುಮಾರ್ ಇತ್ತೀಚೆಗೆ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಆಹಾರ ಸೇವಿಸುವ ಮೂಲಕ ಶುಚಿ, ರುಚಿ ಪರಿಶೀಲಿಸಿದ್ದರು. ಶಾಸಕರು ಭೇಟಿ ನೀಡುವ ಮುನ್ಸೂಚನೆ ಅರಿತ ಹಾಸ್ಟೆಲ್ ವಾರ್ಡನ್, ಹಾಸ್ಟೆಲ್‌ನಲ್ಲಿರುವ ಯಾವುದೇ ಅವ್ಯವಸ್ಥೆ ಕುರಿತು ಶಾಸಕರ ಮುಂದೆ ಬಾಯಿ ಬಿಡಬಾರದು ಎಂದು ವಿದ್ಯಾರ್ಥಿನಿಯರಿಗೆ ಸೂಚಿಸಿದ್ದರು ಎನ್ನಲಾಗಿದೆ.
ಹಾಸ್ಟೆಲ್‌ನಲ್ಲಿ ಉಂಟಾಗಬಹುದಾದ ಸಮಸ್ಯೆ ಊಹಿಸಿಕೊಂಡ ವಿದ್ಯಾರ್ಥಿನಿಯರು ಊಟದ ಕಳಪೆ ಬಗ್ಗೆ ಶಾಸಕರಿಗೆ ತಿಳಿಸಲು ಧೈರ್ಯ ಮಾಡದೆ, ಕೇವಲ ಬಿಸಿನೀರಿನ ಸಮಸ್ಯೆಯನ್ನಷ್ಟೇ ಗಮನಕ್ಕೆ ತಂದಿದ್ದರು.
ಕೋಲಾರ ತಾಲೂಕು ಚಿಕ್ಕಹಸಾಳ ಸಮೀಪದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳಿಗೆ ನೀಡಿರುವ ಅನ್ನದಲ್ಲಿ ಹುಳು ಪತ್ತೆಯಾಗಿರುವುದು.
ಜು.6, 7ರಂದು ರಾತ್ರಿ ವಿದ್ಯಾರ್ಥಿನಿಯರಿಗೆ ನೀಡಲಾದ ಅನ್ನ ಸಾಂಬರ್‌ನಲ್ಲಿ ಹುಳುಗಳು ಪತ್ತೆಯಾಗಿವೆ. ಅಲ್ಲದೆ ಇತ್ತೀಚೆಗೆ ಮಜ್ಜಿಗೆಯಲ್ಲಿ ಜಿರಳೆ ಸಹ ಪತ್ತೆಯಾಗಿತ್ತು ಎನ್ನುವುದು ವಿದ್ಯಾರ್ಥಿನಿಯರ ಆರೋಪ.
ಊಟದಲ್ಲಿ ಹುಳಗಳ ಪತ್ತೆಯಾಗಿದ್ದರಿಂದ ಬೇಸತ್ತು ಆತಂಕಗೊಂಡ ವಿದ್ಯಾರ್ಥಿನಿಯರು ಊಟ ಮಾಡದೆ ಉಪವಾಸ ಮಲಗಿದ್ದಾರೆ ಎನ್ನಲಾಗಿದೆ. ಇನ್ನು ಅಡುಗೆಗೆ ಬಳಸುವ ರಾಗಿ ಹಿಟ್ಟು, ತರಕಾರಿ ಸೇರಿ ಯಾವುದೇ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.
ಅನ್ನದಲ್ಲಿ ಹುಳು ಪತ್ತೆಯಾಗಿರುವ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕರ ಕಣ್ಣಿಗೆ ಮರೆಮಾಚಿ ಅಡುಗೆ ಸಿಬ್ಬಂದಿ ಹಾಗೂ ಹಾಸ್ಟೆಲ್ ವಾರ್ಡನ್ ಭಾಗ್ಯಮ್ಮ ವಾಸ್ತವ ಮರೆಮಾಚಿರುವುದು ಸ್ಪಷ್ಟವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net