ಕೋಲಾರಕ್ಕೆ ದಕ್ಕುವುದೇ ಮಂತ್ರಿಗಿರಿ...?

ಕೋಲಾರ ಜಿಲ್ಲೆಯ ಕೈ ಶಾಸಕರು.
ಕೋಲಾರ ಜಿಲ್ಲೆಯ ಕೈ ಶಾಸಕರು.
Published on
ಕಿರುವಾರ ಎಸ್.ಸುದರ್ಶನ್ ಕೋಲಾರ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುವುದು ಬಹುತೇಕ ಖಚಿತವಾಗಿದೆ ಎಂಬ ವದಂತಿ ಬೆನ್ನಲ್ಲೇ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಕೈ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ಚರ್ಚೆಯೂ ಜೋರಾಗಿದೆ.
ಡಿ.ಕೆ.ಶಿವಕುಮಾರ್ ಅವರು ಸಿಎಂ ಆದರೆ, ಸಚಿವ ಸಂಪುಟದಲ್ಲಿ ಜಿಲ್ಲೆಯ ಶಾಸಕರಿಗೂ ಮಣೆ ಹಾಕಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿವೆ.
ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ ಮೂರು, ಕೋಲಾರ ಕೊತ್ತೂರು ಜಿ.ಮಂಜುನಾಥ್ ಮುಳಬಾಗಿಲು, ಕೋಲಾರದಿಂದ ತಲಾ ಒಂದು ಬಾರಿ. ಮಾಲೂರು ಕೆ.ವೈ.ನಂಜೇಗೌಡ, ಕೆಜಿಎಫ್ ರೂಪಕಲಾ ತಲಾ ಎರಡು ಅವಧಿಗೆ ಶಾಸಕರಾಗಿದ್ದಾರೆ. ಆದರೆ, ಜಿಲ್ಲೆಯ ಯಾರಿಗೂ ಮೊದಲ ಅವಧಿಯಲ್ಲಿ ಸಂಪುಟದಲ್ಲಿ ಅವಕಾಶ ಸಿಕ್ಕಿರಲಿಲ್ಲ.
ರಾಜಕೀಯ ಬೆಳವಣಿಗೆಗಳ ನಡುವೆ ಶಾಸಕರು ಮಂತ್ರಿ ಸ್ಥಾನಕ್ಕಾಗಿ ರಾಷ್ಟ್ರಮಟ್ಟದ ನಾಯಕರ ರಾಜ್ಯ, ಮೊರೆ ಹೋಗಿದ್ದರು. ಎಸ್.ಎನ್.ನಾರಾಯಣಸ್ವಾಮಿ ದೆಹಲಿಗೆ ಹೋಗಿ ಬಂದದ್ದು ಜಿಲ್ಲಾ ರಾಜಕಾರಣದಲ್ಲಿ ಕುತೂಹಲ ಮೂಡಿಸಿತ್ತು. ಪರಿಗಣಿಸಿ ಎಸ್.ಎನ್. ನಾರಾಯಣಸ್ವಾಮಿ ನಾರಾಯಣಸ್ವಾಮಿ ಅವರಿಗೆ ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ಅಧ್ಯಕ್ಷ ಸ್ಥಾನ ಹಾಗೂ ಶಾಸಕಿ ರೂಪಕಲಾ ಅವರಿಗೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡಿ ಕ್ಯಾಬಿನೆಟ್ ದರ್ಜೆಯ ಸ್ಥಾನದ ಅವಕಾಶ ಕಲ್ಪಿಸಿಕೊಟ್ಟಿದೆ. ಜತೆಗೆ ಎಂಎಲ್ಲಿ ನಸೀರ್ ಅಹಮದ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಕಲ್ಪಿಸಲಾಗಿತ್ತು.
ಈಗ ಜಿಲ್ಲೆಯ ನಾಲ್ವರೂ ಕೈ ಶಾಸಕರು ಹಿರಿತನ, ಜಾತಿ ಲೆಕ್ಕಾಚಾರದಲ್ಲಿ ಸಚಿವ ಸ್ಥಾನಕ್ಕಾಗಿ ಪಕ್ಷದ ವರಿಷ್ಠರ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಕೆ.ವೈ.ನಂಜೇಗೌಡ ಬೇಡಿಕೆ ಈಗಾಗಲೇ ಕೋಮುಲ್ ಅಧ್ಯಕ್ಷರಾಗಿದ್ದರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇನ್ನು ಬೈರಾಗಿ ಸಮುದಾಯದಿಂದ ಕೊತ್ತೂರು ಜಿ.ಮಂಜುನಾಥ್, ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸಿಎಂ ಬದಲಾವಣೆ ಜತೆಗೆ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೆ.ಎಚ್.ಎಂ ಉಸ್ತುವಾರಿ?
ಕೆಜಿಎಫ್ ಶಾಸಕಿ ರೂಪಕಲಾ ಅವರ ತಂದೆ ಕೆ.ಎಚ್.ಮುನಿಯಪ್ಪ ಅವರು ದೇವನಹಳ್ಳಿ ಕ್ಷೇತ್ರದಿಂದ ಶಾಸಕರಾಗಿ, ಆಹಾರ ಸಚಿವರಾಗಿದ್ದಾರೆ. ಒಂದು ವೇಳೆ ಮುನಿಯಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಮಗಳಿಗೆ ಅವಕಾಶ ಕಲ್ಪಿಸುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ. ಮುನಿಯಪ್ಪ ಅವರು ಸಚಿವರಾಗಿಯೇ ಮುಂದುವರಿದರೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇದೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಂದೆ ರಾಜೀನಾಮೆ ನೀಡಿದರೆ ತನಗೆ ಸಚಿವ ಸ್ಥಾನ ದೊರೆತರೂ ತಂದೆ ಶಾಸಕರಾಗಿಯೇ ಇರಬೇಕಾಗುತ್ತದೆ. ಆದ್ದರಿಂದ ರೂಪಕಲಾ ಸಚಿವ ಸ್ಥಾನ ಬೇಡ ಎಂದಿದ್ದಾರೆ ಎಂಬುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅವಕಾಶ ದೊರೆಯುವ ವಿಶ್ವಾಸ
ಎಸ್‌.ಎನ್.ನಾರಾಯಣಸ್ವಾಮಿ ಅವರು ಮೂರು ಬಾರಿ ಶಾಸಕರಾಗಿದ್ದು, ಹಿರಿಯರಿದ್ದಾರೆ. ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಗಟ್ಟಿ ಹೋರಾಟದಲ್ಲಿದ್ದಾರೆ. ಇದಕ್ಕಾಗಿ ದೆಹಲಿ ಪ್ರವಾಸ, ರಾಜ್ಯ, ರಾಷ್ಟ್ರೀಯ ನಾಯಕರ ಮುಂದೆಯೂ ಬೇಡಿಕೆ ಇಟ್ಟಿದ್ದಾರೆ. ದ್ದಾರೆ. ಎಲ್ಲದರ ನಡುವೆ ಜಾತಿ ಲೆಕ್ಕಾಚಾರದಲ್ಲಿಯೂ ಮಂತ್ರಿ ಸ್ಥಾನ ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಜಿಲ್ಲೆಯಲ್ಲಿ ದಿವಂಗತ ಟಿ.ಚನ್ನಯ್ಯ ಅವರ ನಂತರ ಬಲಗೈ ಸಮುದಾಯವರಿಗೆ ಸಚಿವ ಸ್ಥಾನ ದೊರೆತಿಲ್ಲ. ಇದಕ್ಕೆ ನಾನು ಅರ್ಹನಿದ್ದು ಸಚಿವ ಸ್ಥಾನ ದೊರೆಯುವ ವಿಶ್ವಾಸವಿದೆ ಎಂದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net