ಮೊದಲ ಅವಧಿಯಲ್ಲಿ ಸಾಕಷ್ಟು ಮಂದಿ ಹಿರಿಯ ಶಾಸಕರು ಅವಕಾಶದಿಂದ ವಂಚಿತರಾಗಿರುವವರ ಪೈಕಿ ನಾರಾಯಣಸ್ವಾಮಿಯೂ ಒಬ್ಬರು. ಜಿಲ್ಲೆಯಲ್ಲಿ ಈ ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ ಮೂರು ಬಾರಿ, ಕೆ.ವೈ.ನಂಜೇಗೌಡ, ಡಾ.ರೂಪಕಲಾ, ಕೊತ್ತೂರು ಜಿ.ಮಂಜುನಾಥ್ ತಲಾ ಎರಡು ಬಾರಿ ಶಾಸಕರಾಗಿದ್ದಾರೆ. ಇವರ ನಡುವೆ ಒಮ್ಮತದ ಹೊಂದಾಣಿಕೆಯಿಲ್ಲದ ಕಾರಣ ಜಿಲ್ಲೆಗೆ ಮಂತ್ರಿಗಿರಿ ದೊರೆತಿಲ್ಲ. ಈಗ ಮತ್ತೆ ಕೂಗು ಮುನ್ನಲೆಗೆ ಬರುತ್ತಿದ್ದಂತೆ ನಾರಾಯಣಸ್ವಾಮಿ ಅವರು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್, ಹಿರಿಯ : ಮುಖಂಡರೊಂದಿಗೆ ಚರ್ಚೆ ನಡೆಸುತ್ತಿರುವ = ಫೋಟೋಗಳು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.