ತೇಗ, ಹೊಂಗೆ, ಮಾವು, ಹಲಸು, ಶ್ರೀಗಂಧ, ಮಧ್ಯಮ ಪದರ (5ರಿಂದ 15 ಮೀ ): ಸೀಬೆ, ನಿಂಬೆ, ಸೀತಾಫಲ, ರಾಮಫಲ, ಲಕ್ಷ್ಮಣಫಲ, ಹನುಮಫಲ, ಕಾಫಿ, ಟೀ, ಅಡಿಕೆ, ರುದ್ರಾಕ್ಷಿ, ನುಗ್ಗೆ, ಬಾಳೆ. ಕೆಳಗಿನ ಪದರ (1 ರಿಂದ 5 ಮೀ): ತೊಗರಿ, ಕರಿಬೇವು, ಮಲ್ಲಿಗೆ, ಸಾಂಬಾರ ಪದಾರ್ಥಗಳು. ನೆಲಹಾಸು ಹಾಗೂ ಬಳ್ಳಿಗಳು: ಗಿಡಮೂಲಿಕೆಗಳು, ಮೆಣಸಿನಕಾಯಿ, ಶುಂಠಿ, ಅರಿಶಿಣ, ಈರುಳ್ಳಿ, ಬೆಳ್ಳುಳ್ಳಿ, ನೆಲಗಡಲೆ, ಅವರೆ, ಕಾಳುಮೆಣಸು, ವೀಳ್ಯದೆಲೆ ಮತ್ತು ಗೆಡ್ಡೆಗೆಣಸುಗಳು. ಒಂದೇ ಮಾವಿನ ಬುಡದಲ್ಲಿ 10ಕ್ಕೂ ಹೆಚ್ಚು ಗಿಡಗಳು ಬೆಳೆದು ನಿಂತಿವೆ. ಒಂದರ ಕಟಾವು ಮುಗಿಯುತ್ತಿದ್ದಂತೆ ಮತ್ತೊಂದರಲ್ಲಿ ಫಸಲು ಸಿದ್ಧವಿರುತ್ತದೆ. ಕಟಾವಾದ ಗಿಡವನ್ನು 7 ಅಡಿ ಎತ್ತರಕ್ಕೆ ಕತ್ತರಿಸಿ ತೋಟದ ಹಳ್ಳಕ್ಕೆ ಹಾಕಿ ನೈಸರ್ಗಿಕ ಗೊಬ್ಬರ ಮಾಡಲಾಗುತ್ತದೆ.