ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಸಹ ಒಕ್ಕೂಟದ ನಿರ್ದೇಶಕರಾಗಿದ್ದು, ಒಕ್ಕೂಟದ ಪರವಾಗಿ ಸಲಹೆ ಸೂಚನೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕಾಗಿ 15 ಲಕ್ಷ ರೂ. ಬೇಡಿಕೆ ಇಟ್ಟಿರು, ಆಗ 10 ಲಕ್ಷ ನೀಡುವುದು ಹೇಳಲಾಯಿತು, ಇದಕ್ಕೆ ಚರ್ಚೆಯಾಗಿ ನಿರ್ದೇಶಕರೆಲ್ಲ ಒಮ್ಮತದಿಂದ ತೀರ್ಮಾನ ಕೈಗೊಂಡು 15 ಲಕ್ಷ ಕೊಡಲು ಒಪ್ಪಿಗೆ ನೀಡಿದರು, ಅಷ್ಟರೊಳಗೆ ಸಭೆಯಿಂದ ಹೊರ ಹೋಗಿದ್ದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.