ಇಬ್ಬರು ಬಾಲ ಕಾರ್ಮಿಕರ ರಕ್ಷಣೆ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಮೇನಹಳ್ಳಿ ಸಮೀಪದ ಇಟ್ಟಿಗೆ ್ಯಾಕ್ಟರಿಗೆ ಅಧಿಕಾರಿಗಳು ಮಂಗಳವಾರ ದಿಢೀರ್​ ದಾಳಿ ನಡೆಸಿರುವುದು. ಜಂಬಗಿ ರೇಣುಕಾ ಪ್ರಸಾದ್​ ದಿಲೀಪ್​, ರೇಣುಕಾ ಪ್ರಸನ್ನ,
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಮೇನಹಳ್ಳಿ ಸಮೀಪದ ಇಟ್ಟಿಗೆ ್ಯಾಕ್ಟರಿಗೆ ಅಧಿಕಾರಿಗಳು ಮಂಗಳವಾರ ದಿಢೀರ್​ ದಾಳಿ ನಡೆಸಿರುವುದು. ಜಂಬಗಿ ರೇಣುಕಾ ಪ್ರಸಾದ್​ ದಿಲೀಪ್​, ರೇಣುಕಾ ಪ್ರಸನ್ನ,
Published on
ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ರಾಮೇನಹಳ್ಳಿ ಸಮೀಪದ ಇಟ್ಟಿಗೆ ಫ್ಯಾಕ್ಟರಿ ಮೇಲೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, ಇಬ್ಬರು ಬಾಲ ಕಾರ್ಮಿಕರನ್ನು ರಸಿದ್ದಾರೆ.
ಉಪ ವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್​ ದಿಲೀಪ್​ ಅವರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಮೊಹಮ್ಮದ್​ ಇಬ್ರಾಹಿಂ ಮಾಲೀಕರದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಒರಿಸ್ಸಾ ಮೂಲಕ 10 ಮಂದಿ ಕಾರ್ಮಿಕರು ಪತ್ತೆಯಾಗಿದ್ದಾರೆ, ಆ ಪೈಕಿ ಇಬ್ಬರು ಬಾಲ ಕಾರ್ಮಿಕರಿದ್ದು, ಇಟ್ಟಿಗೆ ಫ್ಯಾಕ್ಟರಿ ವಿರುದ್ಧ ದೂರು ದಾಖಲಿಸಿದ್ದಾರೆ. ದಾಳಿ ವೇಳೆ ಮಾಲೀಕರು ಅಕ್ಷೇಪ ವ್ಯಕ್ತಪಡಿಸಲು ಮುಂದಾಗಿದ್ದು, ಸ್ಥಳದಲ್ಲಿದ್ದ ಪೊಲೀಸರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಿದರು.
ಕಾರ್ಮಿಕರು ಒರಿಸ್ಸಾ ಮೂಲದವಾರಿದ್ದು ಫ್ಯಾಕ್ಟರಿಯಲ್ಲಿ ಕೆಲಸ ಮುಗಿದು ವಾರ ಕಳೆದಿದೆ. ತಮ್ಮ ಗ್ರಾಮಕ್ಕೆ ತೆರಳು ಮುಂದಾಗಿದ್ದರು ಸಹ ಹೋಗಲು ಮಾಲೀಕರು ಅವಕಾಶ ನೀಡಿಲ್ಲ ಎಂಬುದು ಕಾರ್ಮಿಕರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸ್ಥಳ ಮಹಜರ್​ ಮಾಡಿಕೊಂಡು ಗ್ರಾಮಗಳಿಗೆ ತರಳು ಅನುವು ಮಾಡಿಕೊಡುವಂತೆ ಮಾಲೀಕರಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀೆ ರೇಣುಕಾ ಪ್ರಸನ್ನ, ಸಿಡಿಪಿಒ ರೇಣುಕಾ, ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್​ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net