ಪಾರದರ್ಶಕ ಎಸ್​ಐಆರ್​ ಪೂರಕ

ಮಾಲೂರಿನಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಎಸ್​ಐಆರ್​ ತರಬೇತಿಯಲ್ಲಿ ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ ಗೌಡ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ತಾಲೂಕು ಅಧ್ಯಕ್ಷ ಕೃಷ್ಣಪ್ಪ ಇದ್ದರು.
ಮಾಲೂರಿನಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಎಸ್​ಐಆರ್​ ತರಬೇತಿಯಲ್ಲಿ ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ ಗೌಡ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ತಾಲೂಕು ಅಧ್ಯಕ್ಷ ಕೃಷ್ಣಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾರದರ್ಶಕ ಎಸ್​ಐಆರ್​ ಪೂರಕ
ಪಾರದರ್ಶಕ ಎಸ್​ಐಆರ್​ ಪೂರಕ
ಕೋಲಾರ/ಮಾಲೂರು: ಕಳ್ಳ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಎಸ್​ಐಆರ್​ ಪೂರಕವಾಗಿದೆ. ಪಾರದರ್ಶಕವಾಗಿ ಮತದಾರರ ಪಟ್ಟಿ ತಯಾರಿಕೆಗೆ ಬೂತ್​ ಮಟ್ಟದ ಏಜೆಂಟರು ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ ಗೌಡ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಎಸ್​ಐಆರ್​ ಕುರಿತು ತರಬೇತಿಯಲ್ಲಿ ಮಾತನಾಡಿ, ತಾಲೂಕಿನಲ್ಲಿರುವ ಭ್ರಷ್ಟಚಾರ ತಡೆಯಲು ಮತ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದರು.
ನಕಲಿ ದಾಖಲೆ ಸೃಷ್ಟಿ ವಿಚಾರನ್ನು ತಹಸೀಲ್ದಾರ್​ರನ್ನು ಪ್ರಶ್ನಿಸಿದ್ದಕ್ಕೆ ದಬ್ಬಾಳಿಕೆ ಪಟ್ಟಕಟ್ಟಿದ್ದಾರೆ. ತಹಸೀಲ್ದಾರ್​ ಕಚೇರಿಯನ್ನು ಹಾಳು ಮಾಡಿದ್ದೇ ಆಡಳಿತ ಪಕ್ಷದವರಲ್ಲವೇ ಎಂದು ಕಿಡಿಕಾರಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗೋಮಾಳ, ಸರ್ಕಾರಿ ಜಮೀನುಗಳು ಭೂಗಳ್ಳರ ಪಾಲಾಗುತ್ತಿವೆ. ಅದಕ್ಕೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ.ಈ ಬಗ್ಗೆ ಗಮನಕ್ಕೆ ತಂದರೆ ಹೋರಾಟ ನಡೆಸಲಾಗುವುದು, ತಹಸೀಲ್ದಾರ್​ ಸಂಬಂಧಿಕರ ಹೆಸರಿಗೆ 12 ಗುಂಟೆ ಜಾಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದರ ವಿರುದ್ಧ ಹೋರಾಟಕ್ಕೆ ಮಾಲೂರಿನ ಜನ ಸಹಕಾರ ನೀಡಬೇಕು ಎಂದು ಕೋರಿದರು.
ತೊರ್ನಹಳ್ಳಿ ಸರ್ಕಾರಿ ಜಮೀನು ಸಂಬಂಧ ನಕಲಿ ದಾಖಲೆ ಸೃಷ್ಟಿ ಮಾಡಿರುವುದು ಯಾರು ಎಂಬದನ್ನು ಪತ್ತೆ ಹಚ್ಚಲು ದೂರು ನೀಡಲಾಗಿದೆ. ಆದರೆ, ಕೋಲಾರಕ್ಕೆ ಹೋಗಿ ಪತ್ರಿಕಾಗೋಷ್ಠಿ ಮಾಡಿರುವವರು ಯಾರು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಪೊಲೀಸರು ಅವರನ್ನು ಬಂಧಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net