ಕೋಲಾರದಿಂದ ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಮುಳಬಾಗಿಲು, ಬಂಗಾರಪೇಟೆ ಮುಖ್ಯ ರಸ್ತೆ ಹೊರತು ಪಡಿಸಿದರೆ, ನಿತ್ಯ ಜನಜಂಗುಳಿಯಿರುವ ಕಾಳಮ್ಮಗುಡಿ ರಸ್ತೆ, ಎಂಜಿ ರಸ್ತೆ, ಅಮ್ಮವಾರಿಪೇಟೆ, ದೊಡ್ಡಪೇಟೆ, ಕಾರಂಜಿಕಟ್ಟೆ, ರಸ್ತೆ ಬಹಳ ಅಂತರಗಂಗೆ ಕಿರಿದಾಗಿವೆ. ಈ ಹಿಂದೆ ಡಾ.ಕೆ.ವಿ.ತ್ರಿಲೋಕಚಂದ್ರ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ 2015-2016ರಲ್ಲಿಯೇ ಕಿರಿದಾದ ರಸ್ತೆಗಳನ್ನು ಗುರುತಿಸಿ ವಿಸ್ತರಣೆ ಮಾಡಲು ಗುರುತು ಹಾಕಲಾಗಿತ್ತು. ಆಗ ಹಲವು ಮಾಲೀಕರು ಪರಿಹಾರಕ್ಕೂ ಒತ್ತಾಯಿಸಿದರು. ಇನ್ನು ಕೆಲವರು ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.