ಮಾಲೂರು, ನರಸಾಪುರ, ವೇಮಗಲ್ ಕೈಗಾರಿಕೆಗಳಿಗೆ ಹೋಗುವ ಕಾರ್ಮಿಕರು ಕೋಲಾರ ನಗರ ಸೇರಿ ವಿವಿಧೆಡೆ ರೂಂ, ಮನೆಗಳಲ್ಲಿ ವಾಸವಿದ್ದರೆ. ಅವರಲ್ಲಿ ಬಹುತೇಕರು 3 ಕೆಜಿ, 5 ಕೆಜಿ ಸಿಲಿಂಡರ್‌ಗಳನ್ನು ಇಟ್ಟುಕೊಂಡಿದ್ದು, ರಿ ಫಿಲ್ಲಿಂಗ್ ಸ್ಥಳಗಳಲ್ಲಿ ಗ್ಯಾಸ್ ಖರೀದಿ ಮಾಡುತ್ತಿದ್ದರು. ಯುದ್ದಕ್ಕೂ ಮುಂಚೆ ಕಾಳಸಂತೆಯಲ್ಲಿ 1 ಕೆಜಿ ಗ್ಯಾಸ್ ಗೆ 100 ರೂ.ಗೆ ದೊರೆಯುತ್ತಿತ್ತು, ಈಗ 200ರಿಂದ 250ಕ್ಕೆ ದರ ಏರಿಕೆ ಮಾಡಿದ್ದು, ಕಾರ್ಮಿಕರು ಅಡುಗೆ ಮಾಡಿಕೊಳ್ಳಲು ಸಮಸ್ಯೆ ಎದುರಿಸುವಂತಾಗಿದೆ.