ಎರಡು ವರ್ಷವಾದರು ಬರಲಿಲ್ಲ ಕೂಲಿ

ನರೇಗಾ ಯೋಜನೆಯಡಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕೂಲಿಕಾರರು.
ನರೇಗಾ ಯೋಜನೆಯಡಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕೂಲಿಕಾರರು.
Published on
ಕಿರುವಾರ ಎಸ್​.ಸುದರ್ಶನ್​ ಕೋಲಾರ
ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜಯಡಿ ದುಡಿದ ಕಾರ್ಮಿಕರಿಗೆ ಎರಡುವರೆ ತಿಂಗಳಿನಿಂದ ಕೂಲಿಕಾರರಿಗೆ ಕೂಲಿ ಮೊತ್ತ ಹಾಗೂ ಪೂರ್ಣಗೊಳಿಸಲಾಗಿರುವ ಕಾಮಗಾರಿಯ ಸಾಮಗ್ರಿ ಹಣ ಎರಡು ವರ್ಷದಿಂದ ಬಾಕಿ ಉಳಿದುಕೊಂಡಿದ್ದು, ಕೂಲಿಕಾರರು, ಸಾಮಾಗ್ರಿ ಪೂರೈಕೆ ಮಾಡಿರುವವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಸಮುದಾಯ ಮತ್ತು ವೈಯಕ್ತಿಕ ಅಭಿವೃದ್ಧಿ ಕೆಲಸಗಳನ್ನು ಗ್ರಾ.ಪಂ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಮುದಾಯ ಕೆಲಸಗಳಿಗೆ ಬೇಕಾಗಿರುವ ಸಾಮಗ್ರಿಗಳ ಪೂರೈಸಲು ಪಂಚಾಯಿತಿ ಮಟ್ಟದಲ್ಲೇ ಟೆಂಡರ್​ ಕರೆದು, ಗುತ್ತಿಗೆದಾರನಿಂದ ಪೂರೈಕೆ ಮಾಡಿಸಿಕೊಳ್ಳಲಾಗಿರುತ್ತದೆ. ಅವರಿಗೂ ಸಹ ಸಕಾಲಕ್ಕೆ ಬಿಲ್​ ಪಾವತಿ ಮಾಡದೆ ಇರುವುದರಿಂದ ಮುಂದೆ ಆಗಬೇಕಾಗಿರುವ ಕೆಲಸಗಳಿಗೆ ಸಾಮಗ್ರಿ ಪೂರೈಕೆ ಮಾಡಬೇಕು ಹಿಂಜರಿಯುತ್ತಿದ್ದಾರೆ. ಮುಂದಿನ ತಿಂಗಳಿಂದ ವಿಬಿಜಿ ರಾಮ್​ ಜಿ ಜಾರಿಯಾಗುವ ನಿರೀೆಯಿದ್ದು ಬಾಕಿ ಮೊತ್ತ ಬಿಡುಗಡೆಯಾಗುತ್ತದೊ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ.
ಸಾಮಗ್ರಿ ಪೂರೈಕೆ ಮಾಡುವವರಿಗೆ ಕಾಮಗಾರಿಗೆ ಬೇಕಾಗಿರುವ ವಸ್ತುಗಳೇನು ಉಚಿತವಾಗಿ ದೊರೆಯುವುದಿಲ್ಲ. ಆದರು ಸಹ ಗುತ್ತಿಗೆದಾರರು ಜಿಎಸ್ಟಿ ಹಣವನ್ನು ಮುಂಗಡವಾಗಿಯೇ ಪಾವತಿ ಮಾಡಬೇಕು. ಖರೀದಿಗಾಗಿ ಮಾಡಿರುವ ಸಾಲವನ್ನು ತೀರಿಸಲಾಗದೆ ಸರ್ಕಾರದಿಂದ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾದುಕುಳಿತಿದ್ದಾರೆ.
* ಕೂಲಿಗಾರರ ಆಕ್ರೋಶ
ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ಹೆಸರನ್ನು ಬದಲಾಯಿಸಿ ವಿಬಿಜಿ ರಾಮ್​ ಜಿ ಎಂದು ಹೆಸರಿಟ್ಟಿದೆ. ಈ ಮೊದಲು ನರೇಗಾ ಯೋಜನೆಯಡಿ ಕೇಂದ್ರದ ಪಾಲು ಶೇ.90 ಹಾಗೂ ರಾಜ್ಯ ಪಾಲು 10ರಷ್ಟಿತ್ತು. ಹೆಸರು ಬದಲಾದ ನಂತರ ಕೇಂದ್ರದ ಪಾಲು ಶೇ.60ರಷ್ಟು ಹಾಗು ರಾಜ್ಯದ ಪಾಲು ಶೇ.40ರಷ್ಟು ಹಂಚಿಕೆಯಾಗಿದೆ. ಈ ಗೊಂದಲ ಸೃಷ್ಟಿಯಾದಾಗಿನಿಂದ ಕೂಲಿ, ಸಾಮಗ್ರಿ ಮೊತ್ತ ಬಾಕಿ ಉಳಿದುಕೊಂಡಿದೆ. ಇದೀಗ ಶೇ.60ರಷ್ಟು ಕೂಲಿ ಮತ್ತೊ ಹಾಗೂ ಶೇ.40ರಷ್ಟು ಸಾಮಗ್ರಿ ಮೊತ್ತ ಬಾಕಿ ಉಳಿದುಕೊಂಡಿದೆ. ಇದೀಗ ಕೇಂದ್ರದ ಪಾಲು ಬಾಕಿದ್ದು, ಕೂಲಿಕಾರರ ಆಕ್ರೋಶಕ್ಕೆ ಕಾರಣವಾಗಿದೆ.
* ಬಾಕಿ ಮೊತ್ತದ ಕತೆಯೇನು...?
ಕಳೆದ 2024-25 ಹಾಗೂ 2025&26ನೇ ಸಾಲಿನ ನರೇಗಾದಡಿ 8.70 ಕೋಟಿ ಬಾಕಿ ಉಳಿದುಕೊಂಡಿದೆ. ವಿಬಿಜಿ ರಾಮ್​ ಜಿ ಜಾರಿಯಾದರೆ ಬಾಕಿ ಮೊತ್ತದ ಕತೆಯೇನು ಎಂಬ ಆತಂಕ ಮನೆ ಮಾಡಿದೆ.
ಗ್ರಾಮೀಣ ಭಾಗದಲ್ಲಿನ ನಿರುದ್ಯೋಗಿಗಳಿಗೆ ಕೆಲಸ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತಂದ ಯೋಜನೆ ನೇಗಾ. ಜಿಲ್ಲೆಯಲ್ಲಿ ಒಟ್ಟು 154 ಗ್ರಾ.ಪಂಗಳಿದ್ದು, ಯೋಜನೆಯಡಿ 2,43,000 ಉದ್ಯೋಗ ಚೀಟಿಗಳಿದ್ದು, ಆ ಪೈಕಿ 1,8000 ಚೀಟಿಗಳು ಸಕ್ರಿಯವಾಗಿದ್ದು, 1,88,000 ಕೂಲಿಕಾರರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 2026ರ ಜನವರಿಯಿಂದ ಇಲ್ಲಿಯವರೆಗೂ ದುಡಿದ ಕೂಲಿಗಾರರಿಗೆ ವೇತನ ಪಾವತಿ ಆಗಿಲ್ಲ. ಕೆಲವು ಕಡೆ ದಾಖಲಾತಿ ಸಮಸ್ಯೆ ಇತರೆ ಕಾರಣಗಳಿಂದಾಗಿ ವರ್ಷದಿಂದ ಕೂಲಿ ಬಾಕಿ ಉಳಿದುಕೊಂಡಿದೆ.
* ಇಬ್ಬರ ಜಗಳದಲ್ಲಿ ಬಡವರು ಬೀದಿಪಾಲು
ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರನ್ನು ವಿಬಿಜಿ ರಾಮ್​ ಜಿ ಹೆಸರು ಬದಲಾಯಿಸಿ ಹಲವು ಬದಲಾವಣೆಗಳು ತಂದಿದೆ. ಈ ವಿಚಾರವು ಪರ ವಿರೋಧ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರದಿಂದ ಕೂಲಿ ಮತ್ತು ಸಾಮಗ್ರಿ ಹಣ ಬಾಕಿ ಇದೆ.
ನರೇಗಾ ಮತ್ತು ವಿಬಿಜಿ ರಾಮ್​ ಜಿ ಗೊಂದಲ ಉಂಟಾಗಿದ್ದು, ಕೇಂದ್ರ&ರಾಜ್ಯ ಜಗಳದಲ್ಲಿ ಕೂಲಿಕಾರರ ಮತ್ತು ಸಮಾಗ್ರಿ ಪೂರೈಕೆ ಗುತ್ತಿಗೆದಾರರು ಬೀದಿಪಲಾದಂತಾಗಿದೆ.
ಕೋಟ್​...
ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಮೊತ್ತವು ಬಾಕಿಯಿದೆ. ಬಿಡುಗಾಗಿ ಸರ್ಕಾರದ ಮೂಲಕ ಹಲವು ಭಾರಿ ಮನವಿ ಮಾಡಿದ್ದರು ಸ್ಪಂದನೆ ಸಿಕ್ಕಿಲ್ಲ. ಕೇಂದ್ರದವರು ನರೇಗಾ ಯೋಜನೆಯನ್ನೇ ಮೊಟಕುಗೊಳಿಸಲು ಹೊರಟ್ಟಿದ್ದು, ಇದರಲ್ಲಿ ಬಡವರು ಸಮಸ್ಯೆ ಎದುರಿಸುವಂತಾಗಿದೆ.
- ಎಂ.ಎಲ್​.ಅನಿಲ್​ ಕುಮಾರ್​, ಎಂಎಲ್ಸಿ, ಕೋಲಾರ.
ಕೋಟ್​...
ಎರಡುವರೆ ತಿಂಗಳಿಂದ ನರೇಗಾದಡಿಯಲ್ಲಿ ಕೆಲಸ ಮಾಡಿದ್ದೇನೆ, ಪ್ರತಿ 15 ದಿನಕೊಮ್ಮೆ ಹಣ ಪಾವತಿಯಾಗುತ್ತಿತ್ತು, ಬಾಕಿ ಹಣ ಪಾವತಿ ಮಾಡಿ ಎಂದು ಗ್ರಾ.ಪಂ ಅವರನ್ನು ಕೇಳಿದರೆ ಸರ್ಕಾರದಿಂದಲೇ ಬಾಕಿ ಇರುವುದಾಗಿ ಹೇಳುತ್ತಿದ್ದಾರೆ. ಕೂಲಿ ಬಾಕಿ ಇರುವುದರಿಂದ ಕುಟುಂಬ ನಿರ್ವಹಣೆಗೂ ಸಮಸ್ಯೆ ಎದುರಾಗಿದೆ.
- ಹೆಸರು ಹೇಳಲು ಇಚ್ಚಿಸದ ಕೂಲಿಗಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net