ಮುನಿಸಿಕೊಂಡ ಮಳೆರಾಯ

ರಾಗಿ ಬಿತ್ತನೆ ನಾಟಿಗೆ ಸಿದ್ಧತೆ ಕೈಗೊಳ್ಳುತ್ತಿರುವ ರೈತರು.
ರಾಗಿ ಬಿತ್ತನೆ ನಾಟಿಗೆ ಸಿದ್ಧತೆ ಕೈಗೊಳ್ಳುತ್ತಿರುವ ರೈತರು.
Published on
ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯ ಮೇಲೆ ಮಳೆರಾಯ ಮುನಿಸಿಕೊಂಡಿದ್ದು, ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ. ಇದರಿಂದ ಬರದ ಮುನ್ಸೂಚನೆ ಆತಂಕ ಎದುರಾಗಿದೆ.
ಜೂನ್ ಒಳಗೆ ಜಿಲ್ಲೆಗೆ ಮುಂಗಾರು ಮಳೆ ಪ್ರವೇಶಿಸಬೇಕಿತ್ತು. ಇದಕ್ಕೂ ಮೊದಲು ಪೂರ್ವ ಮುಂಗಾರಯ ಮಳೆಯು ಆಗಿಲ್ಲ, ವಾರ್ಷಿಕ ವಾಡಿಕೆ ಮಳೆ 170 ಎಂಎಂ ಇದ್ದು, ಜನವರಿಯಿಂದ ಈಚೆಗೆ 140 ಶೇ‌15 ಕೊರತೆಯಾಗಿದೆ. ಆರಂಭದಲ್ಲಿ ಜಿಲ್ಲೆಯಲ್ಲಿ ಆದ ಮಳೆಗೆ ಕೆಲ ರೈತರು ಭೂಮಿಯನ್ನು ಉಳುಮೆ ಮಾಡಿ. ಬಿತ್ತನೆಗಾಗಿ ಸಿದ್ಧಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 85,801 ಹೆಕ್ಟೇ‌ರ್ ಕೃಷಿ ಪ್ರದೇಶವಿದ್ದು, ಇದುವರೆಗೂ ಆದ ಮಳೆಗೆ 2 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಾಟಿಯಾಗಿದೆ. ಆರಂಭದಲ್ಲಿ ತೊಗರಿ, ಶೇಂಗಾ ನಾಟಿಗೆ ಅವಕಾಶವಿತ್ತು. ಆದರೂ, ಮಳೆ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧನೆಯಾಗಿಲ್ಲ. ಇದೀಗ ರೈತರು ರಾಗಿ, ಅಲಸಂದೆ, ಅವರ ಮೆಕ್ಕೆಜೋಳ ನಾಟಿಗಾಗಿ ಸಿದ್ಧತೆ ಕೈಗೊಂಡಿದ್ದು, ಮಳೆಗಾಗಿ ಮುಖ
ಜೂನ್ ನಂತರ ಜುಲೈ ಎರಡು ವಾರಗಳೂ ಕಳೆದಿದ್ದು, ಇಲ್ಲಿಗೆ ಮುಂಗಾರು ಹಂಗಾಮು ಶೇಕಡವಾರು ದಿನ ಕಳೆದಿದೆ. ಮಾಸಾಂತ್ಯದೊಳಗೆ ಉತ್ತಮ ಮಳೆಯಾದರೆ ಭೂಮಿ ಉಳುಮೆ ಮಾಡಿ ಇಟ್ಟುಕೊಂಡಿರುವವರು ರಾಗಿ ಬಿತ್ತನೆ ಮಾಡಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಳೆಯಾದರೆ ಬಿತ್ತನೆ ಆಗುತ್ತದೆಯೇ ಹೊರತು, ಬೆಳೆ ಫಸಲು ಬರುವ ಸಂದರ್ಭದಲ್ಲಿ ಮಳೆ ಕೊರತೆಯಾಗುವ ಸಾಧ್ಯತೆಯಿರುತ್ತದೆ. ಕಳೆದ ವಾರದಿಂದ ಮೊಡಕಡವಿದ ವಾತಾವರಣ ಇತ್ತಾದರೂ ಗಾಳಿ ಹನಿಗಳು ಸುರಿಯತೊಡಗಿದ್ದವು. ಆದರೆ ಕಳೆದ ನಾಲೈದು ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಬರ ಪರಿಸ್ಥಿತಿ ಎದುರಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಬಿತ್ತನೆ ಬೀಜ,ರಸಗೊಬ್ಬರ ದಾಸ್ತಾನು
ಜಿಲ್ಲೆಯಲ್ಲಿ ಒಟ್ಟು ಕೃಷಿ 85,801 ಹೆಕ್ಟೇರ್ ಪ್ರದೇಶವಿದ್ದು, ಆ ಪೈಕಿ ನೀರಾವರಿ 7,515 ಹಾಗೂ ಮಳೆಯಾಶ್ರಿತ 78,286 ಪ್ರದೇಶ ಇದೆ. ಒಟ್ಟು 2,200 ಎಕರೆ ಪ್ರದೇಶಲ್ಲಿ ಬಿತ್ತನೆಯಾಗಿದೆ, ಪ್ರಮುಖವಾಗಿ ರಾಗಿ, ತೊಗರಿ, ನೆಲಗಡಲೆ (ಶೇಂಗಾ) ಅಲಸಂದೆ ಮುಂಗಾರಿನ ಪ್ರಮುಖ ಬೆಳೆಗಳಾಗಿವೆ. ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ಸಹಾಯಧನದಲ್ಲಿ ಸರಬರಾಜು ಮಾಡಲು ಕೃಷಿ ಇಲಾಖೆಯು ಸಿದ್ಧವಿದ್ದು, ರಾಗಿ 28.10 ಕ್ವಿಂಟಾಲ್, ತೊಗರಿ 9.45 ಕ್ವಿಂಟಾಲ್, ಅಲಸಂದೆ 3.35 ಕ್ವಿಂಟಾಲ್, ನೆಲಗಡಲೆ 258.90 ಕ್ವಿಂಟಾಲ್ ಸೇರಿ ఒట్టు 383.90 ఇంటాలో బిత్తన బింజ దాన్తాను ಮಾಡಿಕೊಂಡಿದ್ದು, 40,415 ಮೆಟ್ರಿಕ್ ಟನ್‌ನಷ್ಟು ಗೊಬ್ಬರ ಬೇಡಿಕೆಯಿದ್ದು, 25,632 ಸಬರಾಜಾಗಿದ್ದು, 12,255 ಮೆಟ್ರಿಕ್ ಟನ್ ದಾಸ್ತಾನು ಲಭ್ಯತೆಯಿದೆ. 888 2 4 4 418 ಟನ್ ದಾಸ್ತಾನಿದೆ ಎಂದು ಇಲಾಖೆ ತಿಳಿಸಿದೆ.
ಅಲ್ಪಾವಧಿ ತಳಿ ನಾಟಿಗೆ ಸಲಹೆ
ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾದ ಕಾರಣ ನೆಲಗಡಲೆ, ತೊಗರಿ ಬೆಳೆ ನಾಟಿ ಪ್ರಗತಿಯಾಗಿಲ್ಲ. ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು ಭಾಗದಲ್ಲಿ ಇದಕ್ಕಾಗಿ ಭೂಮಿ ಹದ ಮಾಡಿ ಇಟ್ಟುಕೊಂಡಿದ್ದು, ರೈತರು ರಾಗಿ ನಾಟಿ ಮಾಡಲಿದ್ದಾರೆ. ಜು.15ರಿಂದ ಆಗಸ್ಟ್ ಅಂತ್ಯದವರೆಗೆ ರಾಗಿ ನಾಟಿಗೆ ಅವಕಾಶವಿದ್ದು, ಅಲ್ಪಾವಧಿಗೆ ಇಳುವರಿ ಕೊಯ್ಲಿಗೆ 28, 202 365, ಕೆಎಂಆರ್ 316 ನಾಟಿ ಮಾಡಿದರೆ ಸೆಪ್ಟೆಬಂರ್, ಅಕ್ಟೋಬರ್ ತಿಂಗಳಲ್ಲಿ ಕೊಯ್ದು ಮಾಡಿಕೊಳ್ಳಬಹುದು.
ಅಲ್ಪಾವಧಿಗೆ ಫಸಲು ಕೊಯ್ಲಿಗೆ ಬರುವ ರಾಗಿ ತಳಿಗಳನ್ನು ರೈತರು ನಾಟಿ ಮಾಡಿದರೆ ಉತ್ತಮ ಇಳುವರಿ ಗಳಿಸಬಹುದು. ಜು.15ರನಂತರ ಜಿಲ್ಲೆಯಲ್ಲಿ ರಾಗಿ ಬಿತ್ತನೆ ಶುರುವಾಗಲಿದ್ದು, ಆಗಸ್ಟ್ ಕೊನೆವರೆಗೂ ಅವಕಾಶವಿದೆ. ಉತ್ತಮ ಮಳೆಯಾದರೆ ಬಿತ್ತನೆ ಕಾರ್ಯವು ಸಾಧನೆಯಾಗುವ ನಿರೀಕ್ಷೆಯಿದೆ.
- ಮಂಜುಳಾ ಜಂಟಿ ಕೃಷಿ ನಿರ್ದೇಶಕಿ, ಕೋಲಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net