ಹೊಯ್ಸಳ ಸಾಮ್ರಾಜ್ಯ ಕುರುಹಿಗೆ ಕಾಯಕಲ್ಪ ಕೊರತೆ

ಮಾಲೂರು ತಾಲೂಕು ಟೇಕಲ್ ಮಧ್ಯಭಾಗದಲ್ಲಿರುವ ದೇವಸ್ಥಾನ.
ಮಾಲೂರು ತಾಲೂಕು ಟೇಕಲ್ ಮಧ್ಯಭಾಗದಲ್ಲಿರುವ ದೇವಸ್ಥಾನ.
Published on
ಟಿ.ಆರ್.ಮುನಿರಾಜು ಟೇಕಲ್
ಮಾಲೂರು ತಾಲೂಕು ಟೇಕಲ್‌ನ ಮಧ್ಯದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ವರದರಾಯಸ್ವಾಮಿ ಮತ್ತು ಸೋಮೇಶ್ವರ ದೇವಾಲಯಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕೊರತೆಯಿಂದ ಇಲ್ಲಿರುವ ಶಾಸನಗಳು ಇತರೆ ಕುರುಹುಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿವೆ.
ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಗರ್ಭಗುಡಿಯ ಉತ್ತರ ಭಾಗದಲ್ಲಿ ಕನ್ನಡ ಭಾಷೆಯ ತುಣುಕುಗಳನ್ನು ಹೊಂದಿರುವ ಶಾಸನವೊಂದು ಲಭ್ಯವಾಗಿದೆ. ಆಲಯದ ಸೇವೆಗಳ ಮಹತ್ವ ವಿವರಿಸುವ ಸಮಗ್ರ ಸಂಶೋಧನೆಯಾಗಿಲ್ಲ.
ಟೇಕಲ್‌ ಶ್ರೀ ಈ ಶಾಸನದ ಬಗ್ಗೆ ಇನ್ನೂ ಸೋಮೇಶ್ವರ, ಸರ್ಕಾರಿ ದಾಖಲೆಗಳಲ್ಲೂ ವರದರಾಯಸ್ವಾಮಿ ಈ ಶಾಸನದ ಸಂಪೂರ್ಣ ದೇಗುಲದಲ್ಲಿ ವಿವರಗಳು ಇಲ್ಲದಿರುವುದು ಸವೆಯುತ್ತಿದೆ ಶಾಸನ ವಿಪರ್ಯಾಸ.
ಇತಿಹಾಸ ತಜ್ಞ ನರಸಿಂಹನ್ ತಂಡದ ಸಂಶೋಧನೆಯ ಪ್ರಕಾರ, ಹೊಯ್ಸಳ ಸಾಮ್ರಾಜ್ಯವನ್ನು ಆಳಿದ ಮೂರನೇ ಬಲ್ಲಾಳನ ಆಳ್ವಿಕೆ 1291 ಮತ್ತು 1317ಕ್ಕೆ ಸೇರಿದ ಶಾಸನಗಳಲ್ಲಿ ಶ್ರೀವಲ್ಲಾಳದೇವರ ಕುಮಾರ ದಾತಿಸಿಂಗಯ್ಯ ದಣ್ಣಾಯಕ ಎಂಬ ಪ್ರಸ್ತಾಪವಿದೆ. ಈತ ಬಲ್ಲಾಳನ ಮಹಾಮಂತ್ರಿಯಾಗಿದ್ದ. ಟೇಕಲ್‌ನ ವರದರಾಜಸ್ವಾಮಿ ದೇವಾಲಯದ ಶಾಸನಗಳಲ್ಲಿಯೂ ಈತನ ಹೆಸರು ಕಂಡುಬಂದಿದೆ. ಈತನಿಂದಲೇ ಟೇಕಲ್‌ನಲ್ಲಿ ಸಿಂಗೀಶ್ವರ ದೇವಾಲಯ ಅಂದರೆ ಸೋಮೇಶ್ವರ ದೇವಾಲಯ ನಿರ್ಮಾಣವಾಗಿರಬಹುದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಸೋಮೇಶ್ವರನ ಹೆಸರಿನ ಪ್ರಾಚೀನ ಸಿಂಗೀಶ್ವರ ದೇವಾಲಯವನ್ನು ಹೊಯ್ಸಳ ವಾಸ್ತುಶಿಲ್ಪ ಶೈಲಿಗೆ ಅನುಗುಣವಾಗಿ ನಿರ್ಮಿಸಲಾಗಿದೆ. ಇಂದಿಗೂ ಅಲಯದ ಕೆಲವು ಕಂಬಗಳು ಮತ್ತು ಗೋಡೆಗಳಲ್ಲಿ ಹಾದು ಹೋಗಿರುವ ಉಬ್ಬುತಬ್ಬುಗಳನ್ನು ಕಾಣಬಹುದು. ಆದರೆ ಸೂಕ್ತ ನಿರ್ವಹಣೆಯ ಕೊರತೆಯಿಂದ ದೇವಾಲಯದ ಬಹುಭಾಗ ಹಾಳಾಗಿದೆ. ದುರಸ್ತಿ ಕಾರ್ಯ ನಡೆದರೆ ಶಾಸನದ ವಿವರಗಳು ಮತ್ತು ಆಲಯದ ಮೂಲ ಸ್ವರೂಪ ಮರಳಿ ಕಾಣಬಹುದು. ಮತ್ತು ಈಗಲೇ ಎಚ್ಚೆತ್ತುಕೊಂಡು ಸಂರಕ್ಷಣೆಗೆ ಮುಂದಾದರೆ ಮುಂದಿನ ಪೀಳಿಗೆಗೆ ಇತಿಹಾಸ ಉಳಿಸಬಹುದಾಗಿದೆ.
ಹೊಯ್ಸಳರ ಕಾಲದ ಈ ದೇವಾಲಯ ನಮ್ಮ ಹೆಮ್ಮೆ. ಧಾರ್ಮಿಕ ದತ್ತಿ ಇಲಾಖೆ ಕೂಡಲೆ ದೇಗುಲಕ್ಕೆ ಕಾಯಕಲ್ಪ ಕಾರ್ಯ ಕೈಗೊಂಡು, ಶಾಸನಗಳನ್ನು ಸಂರಕ್ಷಿಸಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಋಷಿಮುನಿಗಳ ನೆಲೆ
ಅಳ್ಳಾಳನಾಥನಿಗೆ ಪ್ರತಿ ನಾಮವಾದ ವರದರಾಜಸ್ವಾಮಿ ದೇವರ ಆರಾಧನೆಗೆ ಪ್ರಸಿದ್ಧವಾದ ಸ್ಥಳವೇ ಟೇಕಲ್ ಗ್ರಾಮ. ಮನೋಹರವಾದ ಬೆಟ್ಟಗುಡ್ಡಗಳ ಹಿನ್ನೆಲೆ ಹೊಂದಿರುವ ಈ ಗ್ರಾಮ ಬೆಂಗಳೂರು-ಚೆನ್ನೈ ರೈಲು ಮಾರ್ಗದಲ್ಲಿ ಸುಂದರ ನೋಟ ಕಾಣಸಿಗುತ್ತದೆ. ಋಷಿಮುನಿಗಳು ನೆಲೆಸಿದ್ದ ಈ ಗ್ರಾಮವನ್ನು ತೇಕಲ್, ಉತ್ತಮ ಕಂಚಿ, ಉತ್ತನೂರು ಕಂಚಿ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಕಾಲಕ್ರಮೇಣ ಇದು ಟೇಕಲ್ ಎಂಬ ಹೆಸರು ಶಾಶ್ವತವಾಯಿತು.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕುಸಿದ ಭಕ್ತರ ಸಂಖ್ಯೆ
ಶ್ರೀ ವರದರಾಯಸ್ವಾಮಿ ದೇವಾಲಯ ಆವರಣದಲ್ಲಿರುವ ಸೇದು ಬಾವಿಯಿಂದ ನೀರನ್ನು ಮೇಲೆತ್ತಿ ಸ್ನಾನ ಮಾಡಿದರೆ ಹರಕೆ ತೀರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಗ್ರಾಮದಲ್ಲಿ ಚೇಳರ ಕಾಲದಿಂದಲೂ 101 ವಿಗ್ರಹಗಳನ್ನು ಹೊಂದಿರುವ ದೇವಾಲಯಗಳಿವೆ ಎಂದು ಇತಿಹಾಸ ಹೇಳುತ್ತದೆ. ಬೆಂಗಳೂರು, ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಅಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಭಕ್ತರ ಆಗಮನ ದಿನದಿಂದ ದಿನಕ್ಕೆ ಕ್ಷೀಣವಾಗಿದೆ.
ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರತಿ ವರ್ಷ ವರದರಾಯಸ್ವಾಮಿ ಬ್ರಹ್ಮ ರಥೋತ್ಸವ ನಡೆಸಲಾಗುತ್ತಿದೆ. ದೇವಾಲಯವನ್ನು ವೈಜ್ಞಾನಿಕವಾಗಿ ದುರಸ್ತಿ ಮಾಡಿ, ಪ್ರವಾಸಿ ಮತ್ತು ಪುಣ್ಯಕ್ಷೇತ್ರವಾಗಿ ಅಭಿವೃದ್ಧಿಪಡಿಸಿದರೆ ಹೆಚ್ಚಿನ ಭಕ್ತರು ಆಕರ್ಷಿತರಾಗುತ್ತಾರೆ.
- ರಮೇಶ್ ಶಾಸ್ತ್ರಿ ಪ್ರಧಾನ ಅರ್ಚಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net