ಉತ್ತರ ವಿವಿ ಬ್ರ್ಯಾಂಡ್​ ಆಗಿಸುವ ಗುರಿ

ಪ್ರೊ.ಬಿ.ಕೆ.ರವಿ
ಪ್ರೊ.ಬಿ.ಕೆ.ರವಿ
Published on
ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಹೊಸ ಕೋರ್ಸ್​ಗಳನ್ನು ಪ್ರಾರಂಭಿಸುವ ಮೂಲಕ, ರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್​ ಆಗಿಸಲಾಗುವುದು ಎಂದು ವಿವಿಯ ನೂತನ ಕುಲಪತಿ ಪ್ರೊ.ಬಿ.ಕೆ.ರವಿ ಅಭಿಮತ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರು ಕೇಂದ್ರ ವಿವಿಯಿಂದ ವಿಭಜನೆಯಾಗಿ, ಬೆಂಗಳೂರು ಉತ್ತರ ವಿವಿ ಸ್ಥಾಪನೆಯಾಗಿದೆ. ಇದರಡಿಯಲ್ಲಿ ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಲು ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.
ವಿವಿ ವ್ಯಾಪ್ತಿಗೆ 4 ಜಿಲ್ಲೆಗಳ ಕಾಲೇಜುಗಳು ಬರುತ್ತವೆ, ಈಗಿರುವ ಕೋರ್ಸ್​ಗಳಲ್ಲಿ ವಿಜ್ಞಾನ ವಿಭಾಗವು ಮುಂಚೂಣಿಯಲ್ಲಿದೆ. ವಾಣಿಜ್ಯ, ಕಲಾ ವಿಭಾಗದಲ್ಲೂ ಸಹ ವಿದ್ಯಾರ್ಥಿಗಳು ಹೆಚ್ಚು ಅಸಕ್ತಿಹೊಂದು ದಾಖಲಾಗಿದ್ದಾರೆ. ಮುಂದಿನ ಉನ್ನತ ವ್ಯಾಸಂಗವು ವಿವಿಯಲ್ಲೆ ದೊರೆಯಬೇಕು ಎಂಬ ಗುರಿ ಹೊಂದಿದ್ದು, ಎಂಬಿಎ, ಎಂಸಿಎ ಸೇರಿದಂತೆ ಹಲವು ಕೋರ್ಸ್​ಗಳ ಪ್ರಾರಂಭಿಸಲಾಗುವುದು. ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಬೋಧನೆ ಮಾಡುವುದು, ಬದುಕು ರೂಪಿಸಿಕೊಳ್ಳಲು ಕೌಶಲ ತರಬೇತಿ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಮಾದ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಬದಲಾವಣೆಗಳು ಆದವು, ಯೂಟ್ಯೂಬ್​ ಛಾನಲ್​, ಹೊಸ ಪತ್ರಿಕೆಗಳು ಸ್ವಾಭಿಮಾನದಡಿ ಬಂದವು ಹೊರತು ನೆಲೆಯೂರಲಿಲ್ಲ. ದೇಶ, ರಾಜ್ಯ ಅಭಿವೃದ್ಧಿ ಪ್ರಗತಿ ಕಾಣಲು ಮಾದ್ಯಮ ಪ್ರಮುಖವಾಗಿದೆ ಎಂದು ಹೇಳಿದರು.
ಟೆಲಿವಿಷನ್​ ಬಂದ ನಂತರ ಮುದ್ರಣಕ್ಕೆ ಮಾದ್ಯಮ ಪೆಟ್ಟು ಬೀಳುತ್ತದೆ ಎಂಬ ಭಾವನೆ ಹುಟ್ಟಿತು. ಆದರೆ ಪತ್ರಿಕೆಗಳು ಬಲಿಷ್ಠವಾದವು. ಬೇರೆ ದೇಶಗಳಲ್ಲಿ ಮಾದ್ಯಮಗಳು ಮೂಲೆಗುಂಪಾದಾವುಮ ನಮ್ಮ ದೇಶದಲ್ಲಿ ಅಭಿವೃದ್ಧಿ ಹೊಂದಿದವು. ವಿದ್ಯುನ್ಮಾನ, ಮನರಂಜನೆ, ಮುದ್ರಣ ಮಾದ್ಯಮಗಳು ಜತೆಜತೆಯಾಗಿ ಮುಂದೆ ಬಂದವು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಜಿಲ್ಲಾಧ್ಯಕ್ಷ ಎಸ್​.ಕೆ.ಚಂದ್ರಶೇಖರ್​, ಪ್ರಧಾನ ಕಾರ್ಯದರ್ಶಿ ಸುರೇಶ್​, ಖಜಾಂಜಿ ರಾಜೇಂದ್ರ ಇದ್ದರು.
* ಇನ್ಸಿಟ್ಯೂಟ್​ ಅ್​ ಮಿಡಿಯಾ ಸೈನ್ಸ್​ ಪ್ರಾರಂಭ
ಮೊದಲು ಇದ್ದ ಪತ್ರಿಕೋದ್ಯಮವನ್ನು ಮುಚ್ಚಲಾಗಿದ್ದು, ಇದನ್ನು ಮತ್ತೆ ಪ್ರಾರಂಭಿಸಲಾಗುವುದು. ಈ ವಿಭಾಗದಲ್ಲಿ ಇನ್ಸಿಟ್ಯೂಟ್​ ಅ್​ ಮಿಡಿಯಾ ಸೈನ್ಸ್​ (ಪತ್ರಿಕೋದ್ಯಮ) ವಿಭಾಗದಲ್ಲಿ ಸ್ಟುಡಿಯೋ ತೆರೆದು ಚಲನಚಿತ್ರ, ಮುದ್ರಣ, ವಿದ್ಯುನ್ಮಾನ ಮಾದ್ಯಮ ಕುರಿತು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ತಂತ್ರಜ್ಞಾನದ ಜೊತೆಜೊತೆಗೆ ಬದಲಾಗದಿದ್ದರೆ ನಮಗೆ ಉಳಿಗಾಲವಿಲ್ಲ, ಮಾದ್ಯಮ ಉದ್ಯಮ ಮತ್ತು ಮಾದ್ಯಮ ಶಿಕ್ಷಣ ಕ್ಷೇತ್ರ ಕೈ ಜೋಡಿಸಿದಾಗ ಮಾತ್ರ ಬಲಿಷ್ಠವಾಗುತ್ತದೆ. ಏನು ಅಗತ್ಯವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೋರ್ಸ್​ ಪ್ರಾರಂಭಿಸಲಾಗುವುದು ಎಂದರು.
* ಸವಾಲುಗಳ ನಡುವೆಯೇ ಕ್ಷೇತ್ರ ಮುಂದು
ಆರಂಭದಲ್ಲಿ ಮಾದ್ಯಮ ಕ್ಷೇತ್ರವು ಬಹಳ ಸವಾಲುಗಳ ನಡುವೆ ನಡೆದುಕೊಂಡು ಬರುತ್ತಿವೆ. 1978&-79ರಲ್ಲಿ ಟೆಲಿಗ್ರಾಂ ಮೂಲಕ ಮಾದ್ಯಮಗಳಿಗೆ ಸಂದೇಶ ಕಳುಹಿಸಬೇಕಿತ್ತು, ಅಕ್ಷಕರ ಜೋಡಣೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರು ಸಹ ಸುದ್ದಿಯ ಅರ್ಥಕಳೆದುಕೊಂಡು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿತ್ತು. ಜಾಗತಿಕರಣ, ತಂತ್ರಜ್ಞಾನವೂ ಪತ್ರಿಕೋದ್ಯಮದಲ್ಲಿ ಹಲವು ಬದಲಾವಣೆಗಳನ್ನು ತಂದಿತು. ಆಗಿನ ಕಾಲದಲ್ಲಿ ಯಾವುದೇ ಒಂದು ವಿಚಾರವನ್ನು ಜನಕ್ಕೆ ತಲುಪಿಸಬೇಕಾದರೆ ದಿನಗಳೇ ಕಳೆಯುತ್ತಿದ್ದವು, ಕಾಲ ಬದಲಾಗಿ ಕ್ಷಣಗಳಲ್ಲಿ ಸುದ್ದಿ ಮುಟ್ಟಿಸಲಾಗುತ್ತಿದೆ ಎಂದರು.
* ಕನ್ನಡ ಭಾಷ್ಯ ಮಾದ್ಯಮ ಬಲಿಷ್ಠ
80ರ ದಶಕದ ನಂತರ ಕಂಪ್ಯೂಟರ್​, ತಂತ್ರಜ್ಞಾನ ಬಂದಿತು. ಅಲ್ಲಿಂದ ಇಲ್ಲಿಯವರೆಗೆ ಆದ ಬದಲಾವಣೆಗಳಲ್ಲಿ ಕನ್ನಡ ಭಾಷ್ಯ ಮಾದ್ಯಮ ಬಲಿಷ್ಠವಾಗಿಯೇ ನಡೆಯುತ್ತಿದೆ. ಜಾಗತೀಕರಣದ ವಿರುದ್ಧ ಅಲೆಯಾಗಿ ಲಾಭ ನಷ್ಟಗಳಿಕೆಯ ಮಾದ್ಯಮವಾಗಿ ಹುಟ್ಟಿತು, ಮನರಂಜನೆ
ಕನ್ನಡ ಭಾಷ ಮಾದ್ಯಮ ಪ್ರಥಮವಾಗಿದ್ದು, ಭಾರತೀಯ ಮನರಂಜನಾ ಮಾದ್ಯಮವನ್ನು ಯಾವುದೇ ದೇಶವು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಇದೀಗ ಜಪಾನ್​, ಅಮೆರಿಕಾ, ಕೋರಿಯಾ ಸೇರಿದಂತೆ ಹಲವು ದೇಶಗಳು ಭಾರತೀಯ ಮಾದ್ಯಮದಲ್ಲಿ ಹೂಡಿಕೆ ಮಾಡಲು ಸಾಲಿನಲ್ಲಿ ನಿಂತಿವೆ ಎಂದು ಬಿ.ಕೆ.ರವಿ ಮಾಹಿತಿ ನೀಡಿದರು.
* ಪತ್ರಕರ್ತರಿಗಾಗಿ ಖಾಯಂ ವಿಮೆ ಅಗತ್ಯ
ಕೋವಿಡ್​ ನಂತರ ಶೇ.40ರಷ್ಟು ಪತ್ರಕರ್ತರು ಕೆಲಸ ಕಳೆದುಕೊಂಡರು. ಅಂದಿನಿಂದಲೂ ಪತ್ರಕರ್ತರು ಬಹಳ ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ. ಕ್ಷಣಕ್ಷಣಕ್ಕೆ ಜನರಿಗೆ ಮಾಹಿತಿ ನೀಡುತ್ತಿದ್ದರಿಂದ ಜನ ಪ್ರಾಣ ರಕ್ಷಣೆ ಮಾಡಿಕೊಂಡರು, ಆಗ ಅನೇಕ ಪತ್ರಕರ್ತರು ಪ್ರಾಣ ಕಳೆದುಕೊಂಡರು. ಆದರೆ ಅವರ ರಕ್ಷಣೆಗಾಗಿ ಯಾರು ಧಾವಿಸಲಿಲ್ಲ. ಪತ್ರಕರ್ತರ ರಕ್ಷಣೆಗಾಗಿ ಖಾಯಂ ವಿಮೆಯಾಗಬೇಕಾಗಿದ್ದು, ಈದರ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ ಬಿ.ಕೆ.ರವಿ ಎಚ್ಚರಿಸಿದರು.
* ಆರೋಗ್ಯಕರ ಮಾದ್ಯಮ ಬೇಕು
ಸೃಜನ ಶೀಲತೆ, ಬದ್ಧತೆ, ಶಿಸ್ತು, ಸಮಯ ಪಾಲನೆ, ಸವಾಲು ಎದುರಿಸುವ ಆತ್ಮಸ್ಥೆ$ರ್ಯ ಇದ್ದವರನ್ನು ಕ್ಷೇತ್ರ ಸ್ವೀಕರಿಸುತ್ತಿದೆ. ಬದಲಾವಣೆ ಕಾಣಲು ಮಾದ್ಯಮದಿಂದ ಸಾಧ್ಯ. ಸಾಮಾಜಿಕ ಹಿತಕ್ಕಾಗಿ ಆರೋಗ್ಯಕಾರವಾಗಿ ಕೆಲಸ ಮಾಡಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಜೆಗೆ ನ್ಯೂನತೆಗಳನ್ನು ತೊಡೆದು ಹಾಕಬೇಕು, ಆಮೂಲಕ ಆರೋಗ್ಯಕರ ಮಾದ್ಯಮವಾಗಿ ಕೆಲಸ ನಿರ್ವಹಿಸಬೇಕು ಎಂದು ಬಿ.ಕೆ.ರವಿ ಸಲಹೆ ನೀಡಿದರು.
* ಕೃತಕ ಬುದ್ಧಿ ಮತ್ತೆಯಿಂದ ಪರಿಣಾಮವಿಲ್ಲ
ಕೃತಕ ಬುದ್ಧಿ ಮತ್ತೆಯು ಮನುಷ್ಯನ ನಿರ್ವಹಣೆಯಂತೆ ಕಾರ್ಯಮಾಡುತ್ತದೆ. ಇದು ಮಾದ್ಯಮ ಕ್ಷೇತ್ರದ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಇದರ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಇದರಲ್ಲಿ ಅತಿಯಾದ ವೈಭವೀಕರಣ ಇರುವುದರಿಂದ ಇದನ್ನು ಯಾರು ಹೆಚ್ಚಾಗಿ ನಂಬುವ ಆಗುತ್ತಿಲ್ಲ ಎಂದರು.
* ಪತ್ರಕರ್ತರ ಕಾರ್ಯ ಪವಿತ್ರ
ಮಾಹಿತಿ ಸಾರ್ವಜನಿಕರಿಗೆ ತಲುಪಿಸುವ ಪವಿತ್ರ ಕಾರ್ಯದಲ್ಲಿ ತೊಡಗಿಸಿರುವುದು ಪತ್ರಕರ್ತರು. ಅದ್ದರಿಂದಲೇ ಪ್ರತಿಯೊಂದು ಹಂತದಲ್ಲೂ ಪ್ರಮುಖರಾಗುತ್ತಾರೆ. ರಾಜ್ಯದ ಏಕೀಕರಣದಲ್ಲೂ ಪತ್ರಕರ್ತರು, ವಿಜ್ಞಾನಿಗಳು, ನಾಯಕರು ಪಾತ್ರವಹಿಸಿದರು. ಕನ್ನಡ ಸಾಹಿತ್ಯ, ಚಲನಚಿತ್ರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಪೊಲಿಯೋ, ಕ್ಷಯ ರೋಗ ತಡೆಯಲು ಸಹ ಮಾದ್ಯಮದಿಂದ ಸಾಧ್ಯವಾಗಿದ್ದು, ಇದರ ಕೊಡುಗೆಯನ್ನು ಸ್ಮರಿಸಬೇಕಿದೆ ಎಂದು ರವಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net