ನಗರ ವ್ಯಾಪ್ತಿಯಲ್ಲಿ ವಾಸದ ಮನೆಗಳು ಸೇರಿದಂತೆ, ಗ್ಯಾರೇಜ್, ಬಾರ್, ಬೇಕರಿ, ಹೋಟೆಲ್, ಮಾಂಸದ ಅಂಗಡಿಗಳು, ಬಟ್ಟೆ ಅಂಗಡಿಗಳು, ಬೀದಿ ಬದಿ ವ್ಯಾಪಾರ ಚಟುವಟಿಕೆಗಳು ನಡೆಯುತ್ತಿದೆ. ಇಲ್ಲಿನ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಗರಸಭೆಯಿಂದ ಜಾಗೃತಿ ಮೂಡಿಸಲಾಗಿದೆ. ನಿವಾಸಿಗಳು ಅಂದಾಜು ಶೇ.70ರಷ್ಟು ಕಸವನ್ನು ವಿಂಗಡಿಸಿ ಪೌರಕಾರ್ಮಿಕರ ವಾಹನಕ್ಕೆ ನೀಡುತ್ತಿದ್ದಾರೆ. ಇನ್ನು ಗ್ಯಾರೇಜ್, ಹೋಟೆಲ್, ಮಾಂಸದ ಅಂಗಡಿಗಳವರು ಕೋಡಿಕಣ್ಣೂರು ಕೆರೆ, ಹೆದ್ದಾರಿಯ ರಸ್ತೆ ಬದಿಗೆ ತಂದು ಹಾಕಿಹೋಗುತ್ತಿದ್ದಾರೆ.