ಕಾಂಗ್ರೆಸ್​ ಪಕ್ಷ ನಮ್ಮ ಜಾತಿ

ಕೆ.ವೈ.ನಂಜೇಗೌಡ
ಕೆ.ವೈ.ನಂಜೇಗೌಡ
Published on
ಕೋಲಾರ: ಕಾಂಗ್ರೆಸ್​ನಲ್ಲಿ ಎಲ್ಲ ಸಮುದಾಯದ ಶಾಸಕರು ಆಯ್ಕೆಯಾಗಿದ್ದು, ಇಂತಹದ್ದೆ ನಾಯಕ ಸಿಎಂ ಆಗಲಿ ಎಂದು ಯಾರು ಮಾತನಾಡಿಲ್ಲ. ಕಾಂಗ್ರೆಸ್​ ಪಕ್ಷವೇ ನಮ್ಮ ಜಾತಿ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಕೋಮ್ಮನಹಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ, ಕುರುಬ ಜನ, ಸಂ ಅಂತ ಅಭಿಮಾನ ಇಟ್ಟುಕೊಂಡಿರುವುದರಲ್ಲಿ ತಪ್ಪಿಲ್ಲ. ಪಕ್ಷ ಬಿಟ್ಟು ಬೇರೆಯವರು ತಮ್ಮದೆ ಸಮುದಾಯದ ನಾಯಕರು ಸಿಎಂ ಆಗಬೇಕು ಎಂದು ಹೇಳಿರಬಹುದು. ಆದರೆ ಶಾಸಕರು ಯಾರು ಹೇಳಿಲ್ಲ ಎಂದರು.
ನಾಯಕತ್ವ ವಿಚಾರದಲ್ಲಿರುವ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಅವರು ತೇರೆ ಎಳೆದಿದ್ದಾರೆ. ಪರಸ್ಪರ ಮನೆಗಳಲ್ಲಿ ಬ್ರೇಕ್​ ಫಾಸ್ಟ್​ ಮಾಡಿ ಒಗ್ಗಟ್ಟಿನಿಂದ ಇದ್ದೇವೆ ಎಂದು ತೋರಿಸಿದ್ದಾರೆ. ಇದನ್ನು ವಿಪಕ್ಷದ ನಾಯಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಕುಟುಕಿದರು.
ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್​ ಸರ್ಕಾರವು ಅಧಿಕಾರ ಚಲಾಯಿಸುತ್ತದೆ. ಇನ್ನೇನು ನಮ್ಮ ಮುಂದೆ ಇರುವುದು 2028ರ ಚುನಾವಣೆಯ ಸವಾಲು ಎಂದು ಹೇಳಿದರು.
ಹೈಕಮಾಂಡ್​ ಹೇಳಿರುವ ಹಾಗೆ ಸಿಎಂ, ಡಿಸಿಎಂ ಅವರು ಶಾಸಕರಿಗೆ ಸಂದೇಶ ನೀಡಿದ್ದಾರೆ. ವಿಪಕ್ಷದವರ ಹೇಳಿಕೆಗೂ ತಿರುಗೇಟು ನೀಡಿದ್ದು, ಇದರ ವಿರುದ್ಧ ಹೇಳಿಕೆ ನೀಡಲು ಬಿಜೆಪಿ, ಜೆಡಿಎಸ್​ನವರಿಗೆ ಇನ್ನೇನು ಉಳಿದಿಲ್ಲ ಎಂದು ಛೇಡಿಸಿದರು.
ಇಬ್ಬರ ನಾಯಕತ್ವ ಪಕ್ಷಕ್ಕೆ ಬಹಳ ಮುಖ್ಯ, ಸಚಿವ ಸಂಪುಟ ವಿಸ್ತರಣೆ ವಿಚಾರವು ಬಂದಾಗ ಜಿಲ್ಲೆಗೆ ಅವಕಾಶ ಸಿಗಬೇಕು. ಸ್ವಂತ ಜಿಲ್ಲೆಯವರು ಜಿಲ್ಲಾ ಮಂತ್ರಿಯಿಲ್ಲದಿದ್ದರು ಸಹ ಒಳ್ಳೆಒಳ್ಳೆ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ಸಿಕ್ಕಿದೆ ಎಂದು ತಿಳಿಸಿದರು.
* ರಾಜಕೀಯ ಉದ್ದೇಶಕ್ಕೆ ಭೇಟಿಯಾಗಿಲ್ಲ
ಕಾಂಗ್ರೆಸ್​ 4 ಮಂದಿ ಶಾಸಕರಾಗಿದ್ದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಅಭಿವೃದ್ಧಿ ವಿಚಾರವನ್ನು ಚರ್ಚಿಸಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಸರಿಯಲ್ಲ. ಗುಂಪು ಕಟ್ಟಿಕೊಂಡು ಹೋಗಿಲ್ಲ ಎಂದು ನಂಜೇಗೌಡ ತಿಳಿಸಿದರು.
ಜಿಲ್ಲಾ ಒಕ್ಕೂಟದಿಂದ ಕೆಎಂಎ್​ಗೆ ಪ್ರತಿನಿಧಿಯಾಗಿ ಆಯ್ಕೆಯಾಗಿ ಹೋಗಿದ್ದು, ಅಧ್ಯಕ್ಷ ಸ್ಥಾನದ ಅಕಾಂಯಾಗಿದ್ದೇನೆ. ಪಕ್ಷದ ಹೈಕಮಾಂಡ ಅವಕಾಶ ನೀಡಿದರೆ ಅಧ್ಯಕ್ಷನಾಗುತ್ತೇನೆ ಎಂದರು.
* ಕೇಂದ್ರದಿಂದ ಬಂದ ಅನುದಾನ ಶೂನ್ಯ
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು, ಎನ್​ಡಿಎ ಸಂಸದರು ಕೇಂದ್ರದಿಂದ ಏನು ಅನುದಾನ ತಂದಿದ್ದೇವೆ ಎಂಬುದನ್ನು ತಿಳಿಸಲಿ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗೆ ಕೇಂದ್ರ ಸಚಿವರನ್ನು ಕರೆದಿಲ್ಲ ಎಂದು ಅಪಾಧನೆ ಮಾಡುವ ಬದಲು, ಏನು ಕಾರ್ಯಕ್ರಮ ತಂದಿದ್ದೇವೆ ಎಂದು ತಿಳಿಸಲಿ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಇರುವುದರಿಂದ ಕೇಂದ್ರದಿಂದ ಹಣ ಬಂದಿಲ್ಲ. ಅವರಿಗೆ ದೇಶ ಅಂತ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ ಮರೆತಿದ್ದಾರೆ ಎಂದು ನಂಜೇಗೌಡ ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net