ಸಂಸ್ಥಾನ ಪೂಜೆ: ಶ್ರೀ ಸುಜಯನಿಧಿ ತೀರ್ಥ ಸ್ವಾಮೀಜಿ ಇದೇ ಸಂದರ್ಭ ಸಂಸ್ಥಾನ ಪ್ರತಿಮಾ ರಂಗವಿಠಲ ದೇವರ ಮಹಾಪೂಜೆ ನೆರವೇರಿಸಿದರು. ಶ್ರೀ ಗೋಪಾಲಕೃಷ್ಣ ದೇವರು, ಜನಮೇಜಯ ಪ್ರತಿಷ್ಠಿತ ಪ್ರಾಣದೇವರು, ಶ್ರೀಪಾದರಾಜರ ಮೃತ್ತಿಕಾ ವೃಂದಾವನಗಳಿಗೂ ವಿಶೇಷ ಪೂಜಾರತಿ ಮಾಡಿದರು. ಸೋಸಲೆ ವ್ಯಾಸರಾಜ ಮಠದ ದಿವಾನರಾದ ಪಂಡಿತ ಬ್ರಹ್ಮಣ್ಯಾಚಾರ್ಯ, ಬೆಮ್ಮತ್ತಿ , ವಿಜೇಂದ್ರ ಆಚಾರ್ಯ, ನಾಗಸಂಪಿಗೆ ಆಚಾರ್ಯ ಇತರರು ಪ್ರವಚನ ನೀಡಿದರು.