ಜೀವನ ಮೌಲ್ಯಗಳನ್ನು ಮರೆಯದಿರಿ: ಕುಮಾರ್

ವಿದ್ಯಾರ್ಥಿ ಪರಿಷತ್ ಪದಗ್ರಹಣ ಸಮಾರಂಭದಲ್ಲಿ ಬಿ.ಜಿ.ವಿ.ಕುಮಾರ್ ಅವರು ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಪದಗ್ರಹಣ ಬೋಧಿಸಿದರು. ಗುರುದತ್, ಸುಮಿತ್ರ, ರವಿ ಇತರರಿದ್ದರು.
ವಿದ್ಯಾರ್ಥಿ ಪರಿಷತ್ ಪದಗ್ರಹಣ ಸಮಾರಂಭದಲ್ಲಿ ಬಿ.ಜಿ.ವಿ.ಕುಮಾರ್ ಅವರು ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಪದಗ್ರಹಣ ಬೋಧಿಸಿದರು. ಗುರುದತ್, ಸುಮಿತ್ರ, ರವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೀವನ ಮೌಲ್ಯಗಳನ್ನು ಮರೆಯದಿರಿ: ಕುಮಾರ್
ಮಡಿಕೇರಿ: ಸತ್ಯ, ಧರ್ಮ, ನ್ಯಾಯ ಎಂಬ ಜೀವನ ಮೌಲ್ಯಗಳನ್ನು ಎಂದಿಗೂ ಮರೆಯಬಾರದು. ಯಾವುದೇ ಸಂದರ್ಭದಲ್ಲೂ ಪಕ್ಷಪಾತ ಮಾಡಬಾರದು ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ.ಕುಮಾರ್ ಕರೆ ನೀಡಿದರು.
ಮಡಿಕೇರಿಯ ಕೊಡಗು ವಿದ್ಯಾಲಯದ ಬಿ.ಕೆ.ಸುಬ್ಬಯ್ಯ ಸಭಾಂಗಣದಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ಪದಗ್ರಹಣ ಸಮಾರಂಭದಲ್ಲಿ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಪದಗ್ರಹಣ ಬೋಧಿಸಿ ಅಧಿಕಾರದ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಿ ಮಾತನಾಡಿ, ವಿದ್ಯಾರ್ಥಿ ನಾಯಕರು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದೂ ಕುಮಾರ್ ಕರೆ ನೀಡಿದರು.
ಪ್ರಾಥಮಿಕ ವಿಭಾಗದ ಶಾಲಾ ನಾಯಕ ಮನೀಶ್ ರೈ, ಶಾಲಾ ನಾಯಕಿ ಅಮೃತ ನೀಲಮ್ಮ, ಸಾಂಸ್ಕೃತಿಕ ನಾಯಕಿ ಮೋನಿಷಾ, ಕ್ರೀಡಾ ನಾಯಕ ಕೆವಿನ್ ಕಾರ್ಯಪ್ಪ.ಸಿ.ಎಸ್, ಬಾಪು ಗ್ರೂಪ್ ಲೀಡರ್ ಆನ್ಯ ನಂಜಪ್ಪ, ಝಾನ್ಸಿ ಗ್ರೂಪ್ ಲೀಡರ್ ಕೃಶ್ ಅಯ್ಯಪ್ಪ.ಕೆ.ಕೆ, ಕಿತ್ತೂರು ಗ್ರೂಪ್ ಲೀಡರ್ ಸಾನ್ವಿಕ, ಟಾಗೋರ್ ಗ್ರೂಪ್ ಲೀಡರ್ ಮಾನ್ವಿಕ್.ಬಿ.ಎಸ್ ಅವರಿಗೂ ಅಧಿಕಾರದ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಲಾಯಿತು.
ಇದೇ ಸಂದರ್ಭ ರಾಷ್ಟ್ರೀಯ ಪುಸ್ತಕ ವಾಚನ ದಿನದ ಪ್ರತಿಜ್ಞೆಯನ್ನು ಶಾಲಾ ನಾಯಕಿ ಲಕ್ಷ್ಯ ಪೊನ್ನಕ್ಕ ಬೋಧಿಸಿದರು. ಸಮಾರಂಭದಲ್ಲಿ ಆಡಳಿತ ಸಮಿತಿಯ ಸದಸ್ಯ ಸಿ.ಎಸ್.ಗುರುದತ್, ಮಾಜಿ ಆಡಳಿತ ಸಮಿತಿಯ ಸದಸ್ಯ ಪ್ರೇಮನಾಥ್, ಪ್ರಾಂಶುಪಾಲೆ ಕೆ.ಎಸ್.ಸುಮಿತ್ರ, ಆಡಳಿತ ಮುಖ್ಯಸ್ಥ ಪಿ.ರವಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net