ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕ್ರಮ

ಕೆಜಿಎಫ್​ನ ಡಿಎಆರ್​ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ರೌಡಿ ಪರೇಡ್​ನಲ್ಲಿ ಎಸ್​ಪಿ ಶಿವಾಂಶು ರಜಪೂತ್​, ಡಿವೈಎಸ್​ಪಿ ವಿ.ವಿ.ಲಕ್ಷ್ಮೀಪತಯ್ಯ ಅವರು ರೌಡಿಶೀಟರ್​ಗಳಿಗೆ  ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.
ಕೆಜಿಎಫ್​ನ ಡಿಎಆರ್​ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ರೌಡಿ ಪರೇಡ್​ನಲ್ಲಿ ಎಸ್​ಪಿ ಶಿವಾಂಶು ರಜಪೂತ್​, ಡಿವೈಎಸ್​ಪಿ ವಿ.ವಿ.ಲಕ್ಷ್ಮೀಪತಯ್ಯ ಅವರು ರೌಡಿಶೀಟರ್​ಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕ್ರಮ
ಕೆಜಿಎಫ್​: ರೌಡಿಗಳುಯಾವುದೇ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಅವರ ವಿರುದ್ಧ ಗೂಂಡಾ ಮತ್ತು ಗಡಿಪಾರು ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್​ ಎಚ್ಚರಿಸಿದರು.
ನಗರದ ಡಿಎಆರ್​ ಕವಾಯತು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೌಡಿ ಪರೇಡ್​ನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೌಡಿ ಚಟುವಟಿಕೆ ಮತ್ತು ಮಾದಕವಸ್ತುಗಳ ಮಾರಾಟ ವಿರುದ್ಧ ಕಠಿಣ ಕ್ರಮಕ್ಕೆ ಈಗಾಗಲೇ ಪೊಲೀಸ್​ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಸಾರ್ವಜನಿಕರ ನೆಮ್ಮದಿಗೆ ತೊಂದರೆ ನೀಡದೆ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ಉತ್ತಮ ನಡವಳಿಕೆಯನ್ನು ರೂಢಿಸಿಕೊಂಡು ಕಾನೂನುಬದ್ಧ ಜೀವನ ನಡೆಸಬೇಕು. ನಿಮ್ಮ ವರ್ತನೆ ಮತ್ತು ಚಟುವಟಿಕೆಗಳನ್ನು ನಿರಂತರವಾಗಿ ಪರಿಶೀಲಿಸಿ ನಿಮ್ಮಲ್ಲಿ ಸುಧಾರಣೆ ಕಂಡುಬಂದಲ್ಲಿ ರೌಡಿ ಶೀಟ್​ ಮುಚ್ಚುವ ಕುರಿತು ಪರಿಗಣಿಸಲಾಗುತ್ತದೆ ಎಂದರು.
ಜವಾಬ್ದಾರಿಯುತ ನಾಗರಿಕರಾಗಿ ನಿಮ್ಮ ಪ್ರದೇಶದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಗೂ ಅಧಿಕಾರಿಗಳು ಪರಿಶೀಲನೆಗೆಬಂದಾಗ ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು. ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕು ಎಂದರು.
ಕೆಜಿಎಫ್​ ಪೊಲೀಸ್​ ಘಟಕದ ಎಲ್ಲ ಠಾಣೆವ್ಯಾಪ್ತಿಯಲ್ಲಿ 154 ರೌಡಿ ಶೀಟರ್​ಗಳು ಹಾಜರಾಗಿದ್ದರು. ರೌಡಿ ಪರೇಡ್​ನಲ್ಲಿ ಗೈರಾಗಿರುವ ರೌಡಿಗಳಿಗೆ ಮುಂದಿನ ದಿನಗಳಲ್ಲಿ ವೃತ್ತ ಕಚೇರಿಗಳಲ್ಲಿಪರೇಡ್​ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೌಡಿ ಪರೇಡ್​ಗೆ ಗೈರಾದಲ್ಲಿ ಅಂತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ರೌಡಿ ವರ್ತನೆ ತೋರಿಸುವ ರೀತಿಯಲ್ಲಿ ಪೋಸ್ಟ್​ ಮತ್ತು ರೀಲ್ಸ್​ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪರೇಡ್​ನಲ್ಲಿ ಡಿವೈಎಸ್​ಪಿ ವಿ.ಲಕ್ಷ್ಮೀಪತಯ್ಯ, ಇನ್​ಸ್ಪೆಕ್ಟರ್​ಗಳಾದ ಹರೀಶ್​ರಾವ್​, ಎಂ.ಎಸ್​.ಅನಿಲ್​ ಕುಮಾರ್​, ರವಿಕುಮಾರ್​, ಆರ್​ಪಿಐ ಸೋಮಶೇಖರ್​, ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ಗಳಾದ ಹೊನ್ನೇಗೌಡ, ಬಿ.ವಿ.ಕಿರಣ್​ ಕುಮಾರ್​, ಮಹೇಶ್​ ಮಾಲಿ, ಗುರುರಾಜ ಚಿಂತಕಲ್​, ಸಂಗಮೇಶ್​ ಕೊಲ್ಹಾರ್​, ಕೃಷ್ಣಮೂರ್ತಿ, .ಎಸ್​.ವಿ.ರಾಜಣ್ಣ, ಲಕ್ಷ್ಮೀನಾರಾಯಣ, ಜಿ.ಮಾಲಾ ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net